Breaking News

ಬೋರ್‌ವೆಲ್ ಕೇಸಿಂಗ್ ಪೈಪ್ ಕಳ್ಳತನ: ಓರ್ವ ವಶ

Spread the love

ಸಾಗರ: ತಾಲೂಕಿನ ಮುಂಬಾಳು ಗ್ರಾಮದ ಬೋರ್‌ವೆಲ್ ಕಂಟ್ರಾಕ್ಟರ್ ಲೋಕನಾಥ್ ಅವರ ಮನೆಯಲ್ಲಿ ಸಂಗ್ರಹಿಸಿ ಇರಿಸಿದ್ದ ಬೋರ್‌ವೆಲ್ ಕೇಸಿಂಗ್ ಪೈಪ್ ಕಳ್ಳತನಕ್ಕೆ ಸಂಬಂಧಪಟ್ಟ ಓರ್ವ ಆರೋಪಿಯನ್ನು ಮಾಲು ಸಹಿತ ಗ್ರಾಮಾಂತರ ಠಾಣೆ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಮುಂಬಾಳು ಗ್ರಾಮದ ಲೋಕನಾಥ್ ಅವರು ತಮ್ಮ ಖಾಲಿ ಜಾಗದಲ್ಲಿ ಸಂಗ್ರಹಿಸಿಟ್ಟಿದ್ದ ಬೋರ್‌ವೆಲ್ ಕೇಸಿಂಗ್ ಪೈಪ್‌ಗಳು ಕಳ್ಳತನವಾಗಿರುವುದಕ್ಕೆ ಸಂಬಂಧಪಟ್ಟಂತೆ ಗ್ರಾಮಾಂತರ ಠಾಣೆಗೆ ಫೆ. 17ರಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆ ಪೊಲೀಸರು ಏ. 3ರಂದು ಮೊದಲ ಆರೋಪಿ ಹೊಸನಗರ ತಾಲೂಕಿನ ಚಿರಂಜೀವಿ ಯಾನೆ ಚಿರು ಯಾನೆ ಚಿನ್ನ ಎಂಬಾತನನ್ನು ಸಾಗರ ಸಮೀಪದ ಬಳಸಗೋಡು ಸಮೀಪ ವಶಕ್ಕೆ ಪಡೆಯಲಾಗಿದೆ.

ಚಿರಂಜೀವಿ ಅವರಿಂದ ಸುಮಾರು 2 ಲಕ್ಷ ರೂ. ಬೆಲೆಬಾಳುವ ಬೋರ್‌ವೆಲ್ ಕೇಸಿಂಗ್ ಪೈಪ್ ಮತ್ತು ಅದನ್ನು ಸಾಗಿಸುತ್ತಿದ್ದ ಸುಮಾರು 10 ಲಕ್ಷ ರೂ. ಬೆಲೆಯ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎರಡನೇ ಆರೋಪಿ ಸಾಗರ ತಾಲೂಕು ಗೇರ್‌ಬೀಸ್ ಗ್ರಾಮದ ಪ್ರವೀಣ್ ಯಾನೆ ಪಾಂಡು ತಲೆ ತಪ್ಪಿಸಿಕೊಂಡಿದ್ದಾರೆ.

ಜಿಲ್ಲಾ ರಕ್ಷಣಾಧಿಕಾರಿ ಮಿಥನ್ ಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಅನಿಲ್ ಕುಮಾರ್ ಭೂಮಾರೆಡ್ಡಿ ಅವರ ಮಾರ್ಗದರ್ಶನದಲ್ಲಿ, ಸಾಗರ ಉಪವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ನಾರಾಯಣ ಮಧುಗಿರಿ, ತಿರುಮಲೇಶ್, ಹೊಸಮನಿ, ಸಿಬ್ಬಂದಿಗಳಾದ ಸನಾವುಲ್ಲಾ, ಶೇಕ್ ಫೈರೋಜ್ ಅಹ್ಮದ್, ರವಿಕುಮಾರ್, ಹನುಮಂತ ಜಂಬೂರ್ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ