ಬೆಳಗಾವಿ: ನಮ್ಮದು ಡೆಮಾಕ್ರಟಿಕ್ ಪಾರ್ಟಿ, ಅದರ ಅಡಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಆಗುತ್ತೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಟಿಕೆಟ್ ಅಂತಿಮ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದ ಧರ್ಮನಾಥ ಭವನದಲ್ಲಿ ಶುಕ್ರವಾರ ಅಭ್ಯರ್ಥಿಗಳ ಆಯ್ಕೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ರೀತಿ ನಮ್ಮದು ಪರಿವಾರದ ಪಾರ್ಟಿ ಅಲ್ಲ.ಕಾಂಗ್ರೆಸ್ ಪಾರ್ಟಿ ಸುಳ್ಳು ಆಶ್ವಾಸನೆ ಕೊಡುವುದರಲ್ಲಿ ಪರಿಣಿತರ ಪಕ್ಷ ಅದು ಎಂದರು.
ಗ್ಯಾಸ್ ಸಿಡಿಲಿಂಡರ್ ಗೆ ಹಣ ಕೊಡ್ತೇವಿ, ಹೆಣ್ಣು ಮಕ್ಕಳಿಗೆ ದುಡ್ ಕೊಡ್ತೇವಿ ಅಂತ ಹೇಳ್ತಾರೆ.ಇವರ ಕಾಲದಲ್ಲಿ ಬೆಲೆ ಏರಿಕೆ ಎಷ್ಟಿತ್ತು ಎಂದು ಪ್ರಶ್ನೆ ಮಾಡಿದರು
ಒಂದು ಕುಟುಂಬಕ್ಕೆ ವರ್ಷಕ್ಕೆ 78 ಸಾವಿರ ಕೊಡ್ತೇವಿ, ಗ್ಯಾರಂಟಿ ಕಾರ್ಡ್ ಕೊಡ್ತೇವಿ ಅಂತ ಹೇಳ್ತಿದ್ದಾರೆ ಅವರು ಏನು ಹೇಳ್ತಾರೋ ಅದನ್ನ ಮಾಡೋದೇ ಇಲ್ಲ. ರಾಜಸ್ಥಾನದಲ್ಲಿ ಕೊಟ್ಟ ಭರವಸೆಗಳನ್ನು ಇನ್ನೂ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.