ಬಾಗಲಕೋಟೆ: ನಿನ್ನೆ ರಾತ್ರಿ ಹೃದಯಾಘಾತದಿಂದ ಬಿದರಿ ಕಲ್ಮಠದ ಶಿವಲಿಂಗ ಶ್ರೀಗಳು ಲಿಂಗೈಕ್ಯ ಆಗಿದ್ದಾರೆ.
ಶಿವಲಿಂಗ ಸ್ವಾಮೀಜಿಗಳಿಗೆ 67 ವರ್ಷ ವಯಸ್ಸಾಗಿತ್ತು. ಬಿದರಿ ಕಲ್ಮಠ ಅಪಾರ ಭಕ್ತರ ಬಳಗ ಹೊಂದಿದೆ. ಶಿವಲಿಂಗ ಸ್ವಾಮೀಜಿ ಐದನೇಯವರಾಗಿ ಪೀಠ ಅಲಂಕರಿಸಿದ್ದರು.
ಬಿದರಿಯಲ್ಲಿ ಮೂಲ ಮಠ ಇತ್ತು. 13-11-1986ರಲ್ಲಿ ಬಿದರಿ ಮಠದ ಪೀಠ ಅಲಂಕರಿಸಿದ್ದರು. ಈ ಮಠದ ಶಾಖೆಗಳು ಸವದತ್ತಿ, ಗುಲಗಾಲಜಂಬಗಿಯಲ್ಲಿಯೂ ಇವೆ.
ಸದ್ಯ ಮಠದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಇಂದು ಸಂಜೆ ಶ್ರೀಗಳ ಅಂತ್ಯಕ್ರಿಯೆಯನ್ನು ನಡೆಸಲಾಗುವುದು.