ಐಪಿಎಲ್‌-2023: ಚಾಂಪಿಯನ್‌ ಗುಜರಾತ್‌ಗೆ ಚೆನ್ನೈ ಸವಾಲು

Spread the love

ಹ್ಮದಾಬಾದ್‌: ಕೋವಿಡ್‌ ನಂತರ ಮೊದಲ ಬಾರಿಗೆ ಐಪಿಎಲ್‌ ಉದ್ಘಾಟನಾ ಸಮಾರಂಭ ನಡೆಯಲಿದೆ. ಶುಕ್ರವಾರ ಈ ಸಮಾರಂಭ ಮುಗಿದ ಕೂಡಲೇ ಉದ್ಘಾಟನಾ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಯುವ ನಾಯಕ ಹಾರ್ದಿಕ್‌ ಪಾಂಡ್ಯ ಮತ್ತು ಅನುಭವಿ ಮಹೇಂದ್ರ ಸಿಂಗ್‌ ಧೋನಿ ನಡುವಣ ಹೋರಾಟವೂ ಆಗಿದೆ.
ಐಪಿಎಲ್‌ ನಾಯಕರಾಗಿ ಮೊದಲ ವರ್ಷವೇ ಹಾರ್ದಿಕ್‌ ಪಾಂಡ್ಯ ಮೈದಾನದ ಒಳಗೆ ಮತ್ತು ಹೊರಗೆ ಅಮೋಘ ನಿರ್ವಹಣೆ ದಾಖಲಿಸಿ ತಂಡಕ್ಕೆ ಪ್ರಶಸ್ತಿ ದೊರಕಿಸಿಕೊಟ್ಟಿದ್ದರು. ಅವರು ತಂಡವನ್ನು ಮುನ್ನಡೆಸಿದ ರೀತಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿತ್ತು. ಅವರ ಸಮರ್ಥ ನಾಯಕತ್ವದಿಂದಾಗಿ ಟೈಟಾನ್ಸ್‌ ಉಳಿದ ಯಾವುದೇ ತಂಡಗಳಿಗೆ ಸಾಟಿಯಾಗಲೇ ಇಲ್ಲ.

ಶುಭಮನ್‌ ಗಿಲ್‌ ಪ್ರಚಂಡ ಫಾರ್ಮ್ನಲ್ಲಿರುವುದು, ರಶೀದ್‌ ಖಾನ್‌ ಅವರ ಸ್ಥಿರ ನಿರ್ವಹಣೆ ಹಾಗೂ ಪಾಂಡ್ಯ ಅವರ ಚಿನ್ನದಂತ ಬ್ಯಾಟಿಂಗ್‌ ವೈಭವದಿಂದ ಗುಜರಾತ್‌ ಈ ಬಾರಿಯೂ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ, ಮಾತ್ರವಲ್ಲದೇ ಪ್ರಶಸ್ತಿ ಉಳಿಸಿಕೊಳ್ಳುವ ತಂಡವೆನಿಸಿದೆ. ಡೇವಿಡ್‌ ಮಿಲ್ಲರ್‌ ಅವರ ಅನುಪಸ್ಥಿತಿಯಿಂದ ತಂಡದ ಬ್ಯಾಟಿಂಗ್‌ ಬಲಕ್ಕೆ ಸ್ವಲ್ಪಮಟ್ಟಿನ ಹೊಡೆತ ಬೀಳಬಹುದು. ಆದರೆ ಸ್ಫೋಟಕ ಖ್ಯಾತಿಯ ರಾಹುಲ್‌ ತೆವಾತಿಯಾ ಅವರು ಮಿಲ್ಲರ್‌ ಅವರ ಅನುಪಸ್ಥಿತಿಯನ್ನು ಸರಿದೂಗಿಸಬಹುದು. ಕೇನ್‌ ವಿಲಿಯಮ್ಸನ್‌ ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಬಹಳಷ್ಟು ಮಿಂಚದಿದ್ದರೂ ಅವರೊಬ್ಬ ಪ್ರಚಂಡ ಬ್ಯಾಟರ್‌ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ತನ್ನ ಮೆಂಟರ್‌ ಆಗಿರುವ ಧೋನಿ ಅವರಿಂದ ನಾಯಕತ್ವದ ಗುಣಗಳನ್ನು ಕಲಿತಿರುವ ಹಾರ್ದಿಕ್‌ ಇದೀಗ ಗುಜರಾತ್‌ ತಂಡವನ್ನು ಆರಂಭಿಕ ವರ್ಷದಲ್ಲಿಯೇ ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ಹೊಂದಿದ್ದಾರೆ. ಅದನ್ನು ಈ ವರ್ಷವೂ ಮುಂದುವರಿಸುವ ತವಕದಲ್ಲಿ ಅವರಿದ್ದಾರೆ. ಆದರೆ 42ರ ಹರೆಯದ ಧೋನಿ ಅವರಿಗೆ ಐಪಿಎಲ್‌ನಲ್ಲಿ ಹೇಗೆ ಆಡಬೇಕು, ತಂಡವನ್ನು ಹೇಗೆ ಸಂಯೋಜಿಸಬೇಕೆಂಬುದು ಖಂಡಿತ ತಿಳಿದಿದೆ. ಇದರ ಹೊರತಾಗಿಯೂ ಚೆನ್ನೈ ಕಳೆದ ವರ್ಷ ಪ್ಲೇಆಫ್ಗೆ ತೇರ್ಗಡೆಯಾಗದಿರುವುದು ಅವರಿಗೆ ಬಹಳ ನೋವುಂಟು ಮಾಡಿದೆ.

ಇಂಪ್ಯಾಕ್ಟ್ ಪ್ಲೇಯರ್‌ ಆಗಿ ಸ್ಟೋಕ್ಸ್‌?: ಇದೇ ಮೊದಲ ಬಾರಿ ಐಪಿಎಲ್‌ನಲ್ಲಿ ಬಳಸುವ ಇಂಪ್ಯಾಕ್ಟ್ ಪ್ಲೇಯರ್‌ ನಿಯಮವನ್ನು ಚೆನ್ನೈ ಕಿಂಗ್ಸ್‌ ತಂಡ ಸೂಕ್ತವಾಗಿ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಸದ್ಯ ಇಂಗ್ಲೆಂಡ್‌ ಆಟಗಾರ, ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಬೌಲಿಂಗ್‌ ಮಾಡುವ ಸ್ಥಿತಿಯಲ್ಲಿಲ್ಲ. ಇಂಪ್ಯಾಕ್ಟ್ ಪ್ಲೇಯರ್‌ ನಿಯಮದಂತೆ ತಂಡವೊಂದು ಒಟ್ಟಾರೆ 12 ಆಟಗಾರರನ್ನು ಕಣಕ್ಕಿಳಿಸಬಹುದು. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸ್ಟೋಕ್ಸ್‌ ಚೆನ್ನೈ ಪರ ಇಂಪ್ಯಾಕ್ಟ್ ಪ್ಲೇಯರ್‌ ಆಗಲ್ದಿದಾರಾ?

ಚೆನ್ನೈ ಪರ ಬೆನ್‌ ಸ್ಟೋಕ್ಸ್‌ ಅವರು ಆಡುವುದರಿಂದ ಎದುರಾಳಿ ತಂಡಗಳು ಹೆಚ್ಚುವರಿ ಎಚ್ಚರಿಕೆ ವಹಿಸುವುದು ಖಚಿತ. ಅವರು ಆರಂಭದ ಕೆಲವು ಪಂದ್ಯಗಳಲ್ಲಿ ಹೇಗೂ ಬೌಲಿಂಗ್‌ ಮಾಡುವುದಿಲ್ಲ. ಅಲ್ಲದೇ ಫೀಲ್ಡಿಂಗ್‌ಗೆ ಅವರನ್ನು ಕಣಕ್ಕಿಳಿಸಿ ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ; ಒಟ್ಟಾರೆ 11ರ ತಂಡದಿಂದ ಹೊರಕ್ಕುಳಿಸಿ, ಬ್ಯಾಟಿಂಗ್‌ ವೇಳೆ ಇಂಪ್ಯಾಕ್ಟ್ ಪ್ಲೇಯರ್‌ ರೂಪದಲ್ಲೇ ಇಳಿಸುವುದು ಚೆನ್ನೈಗೆ ಗರಿಷ್ಠ ಲಾಭ ನೀಡಲಿದೆ. ಈ ಕಾರಣಕ್ಕಾಗಿ ಧೋನಿ ನಾಲ್ವರ ಬದಲಿಗೆ ಮೂವರು ವಿದೇಶಿ ಆಟಗಾರರನ್ನು ಆಡಿಸುವ ಬಗ್ಗೆ ಯೋಚಿಸುವ ಸಾಧ್ಯತೆಯಿದೆ.

ತಂಡಗಳ ಬಲಾಬಲವನ್ನು ಗಮನಿಸಿದರೆ ಎರಡೂ ತಂಡಗಳು ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ಹೀಗಾಗಿ ಈ ಪಂದ್ಯ ತೀವ್ರ ಪೈಪೋಟಿಯಿಂದ ಸಾಗುವ ಸಾಧ್ಯತೆಯಿದೆ. ಗುಜರಾತ್‌ ತಂಡದಲ್ಲಿ ನಾಯಕ ಪಾಂಡ್ಯ ಅವರಲ್ಲದೇ ಗಿಲ್‌, ತೆವಾತಿಯಾ, ವಿಲಿಯಮ್ಸನ್‌, ಮ್ಯಾಥ್ಯೂ ವೇಡ್‌ ಹಾಗೂ ಬೌಲಿಂಗ್‌ನಲ್ಲಿ ರಶೀದ್‌ ಖಾನ್‌, ಶಿವಂ ಮಾವಿ, ಮೊಹಮ್ಮದ್‌ ಶಮಿ ಮುಂತಾದವರು ಇದ್ದಾರೆ. ಚೆನ್ನೈ ತಂಡದಲ್ಲಿ ನಾಯಕ ಧೋನಿ ಸೇರಿದಂತೆ ರವೀಂದ್ರ ಜಡೇಜ, ಡೆವೋನ್‌ ಕಾನ್ವೆ, ಋತುರಾಜ್‌ ಗಾಯಕ್ವಾಡ್‌, ಅಂಬಾಟಿ ರಾಯುಡು, ರಹಾನೆ ಮುಂತಾದವರಿದ್ದಾರೆ.

ಆರಂಭ: ರಾತ್ರಿ 7.30


Spread the love

About Laxminews 24x7

Check Also

ಪತ್ರಿಕೆ ಓದಿ ಜ್ಞಾನ ಹೆಚ್ಚಿಸಿಕೊಳ್ಳಿ: ಮುರಗೇಶ ಶಿವಪೂಜಿ

Spread the love ಹುಕ್ಕೇರಿ: ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆ ಓದಿ ಜ್ಞಾನ ಬೆಳೆಸಿಕೊಂಡು ಪ್ರಬುದ್ಧ ನಾಗರಿಕರಾಗಬೇಕು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ