Breaking News

ಯಲ್ಲಮ್ಮನ ಗುಡ್ಡದಲ್ಲಿ ₹21 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪರಶುರಾಮ ವಸತಿ ನಿಲಯ ಉದ್ಘಾಟನೆ

Spread the love

ಗರಗೋಳ: ಯಲ್ಲಮ್ಮನ ಗುಡ್ಡದಲ್ಲಿ ₹21 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪರಶುರಾಮ ವಸತಿ ನಿಲಯ ಉದ್ಘಾಟನೆಗೆ ಸಜ್ಜಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್‌ 28ರಂದು ಮಧ್ಯಾಹ್ನ 12ಕ್ಕೆ ಇದನ್ನು ಭಕ್ತರಿಗೆ ಸಮರ್ಪಣೆ ಮಾಡಲಿದ್ದಾರೆ.

 

ಸದ್ಯ ಜನರ ವಸತಿಗಾಗಿ 100 ಕೊಠಡಿಗಳಿವೆ. ಹೆಚ್ಚಿನ ಭಕ್ತರು ಗುಡ್ಡದ ವಿಶಾಲವಾದ ಪರಿಸರದಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ಭಕ್ತರಿಗೆ ವಸತಿ ಸಮಸ್ಯೆಯಾಗುತ್ತಿದೆ. ಇದನ್ನು ಮನಗಂಡ ಸರ್ಕಾರ 2013ರಲ್ಲಿ 246 ಕೊಠಡಿಗಳುಳ್ಳ ವಸತಿ ನಿಲಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿತ್ತು.

‘ಶಾಸಕರಾಗಿದ್ದ ಆನಂದ ಮಾಮನಿ ಪ್ರಯತ್ನದಿಂದಾಗಿ ವಸತಿ ನಿಲಯ ನಿರ್ಮಾಣವಾಗಿದೆ. ಇಲ್ಲಿ ಶುಚಿತ್ವಕ್ಕೆ ಒತ್ತು ಕೊಡುತ್ತೇವೆ’ ಎಂದು ಯಲ್ಲಮ್ಮ ದೇವಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ತಿಳಿಸಿದ್ದಾರೆ.

‘ಈ ವಸತಿ ನಿಲಯದಲ್ಲಿ ಶುದ್ಧ ಕುಡಿಯುವ ನೀರು, ಶೌಚಗೃಹ ಸೌಕರ್ಯವಿದೆ. ಇದೇ ವಾರದಿಂದ ವಸತಿ ನಿಲಯವನ್ನು ಬಳಕೆಗೆ ಮುಕ್ತಗೊಳಿಸಲಿದ್ದು, ಭಕ್ತರಿಗೆ ಅನುಕೂಲವಾಗಲಿದೆ’ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಬಿ.ಮಹೇಶ ಹೇಳಿದ್ದಾರೆ.


Spread the love

About Laxminews 24x7

Check Also

ಆಪರೇಷನ್ ಸಿಂಧೂರ್ ನಡೆಸುತ್ತಿರುವ ಯೋಧರಿಗೆ ಬೆಂಬಲ… ರಾಜ್ಯ ಕಾಂಗ್ರೆಸ್’ನಿಂದ ಬೃಹತ್ “ತಿರಂಗಾ ರ್ಯಾಲಿ”

Spread the love ಆಪರೇಷನ್ ಸಿಂಧೂರ್ ನಡೆಸುತ್ತಿರುವ ಯೋಧರಿಗೆ ಬೆಂಬಲ… ರಾಜ್ಯ ಕಾಂಗ್ರೆಸ್’ನಿಂದ ಬೃಹತ್ “ತಿರಂಗಾ ರ್ಯಾಲಿ” ಪೆಹಲ್’ಗಾಮ್’ನಲ್ಲಿ ಉಗ್ರರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ