Breaking News

ಎಂಟಿಎಂನಿಂದ ಬಂತು ತುಕ್ಕು ಹಿಡಿದ 2 ಸಾವಿರದ ನೋಟು

Spread the love

ಧಾರವಾಡ: ಸಾಮಾನ್ಯವಾಗಿ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡರೆ ಹೊಸ ನೋಟುಗಳು ಬರುತ್ತವೆ. ಆದರೆ ಧಾರವಾಡದ ಎಟಿಎಂ ಒಂದರಲ್ಲಿ ತುಕ್ಕು ಹಿಡಿದ ನೋಟು ಬರುತ್ತಿವೆ.

ಅದೂ 100 ಹಾಗೂ 500 ರೂ. ನೋಟಲ್ಲ, ಬದಲಾಗಿ ಎರಡು ಸಾವಿರದ ನೋಟುಗಳು. ಧಾರವಾಡ ನಗರದ ಕರ್ನಾಟಕ ವಿಶ್ವವಿದ್ಯಾಲಯದ ಎಸ್‍ಬಿಐ ಎಟಿಎಂನಲ್ಲಿ ಈ ನೋಟುಗಳು ಬಂದಿದ್ದರಿಂದ ಡ್ರಾ ಮಾಡಿದ ವ್ಯಕ್ತಿ ಹೌಹಾರಿದ್ದಾನೆ. ಗೌಸ್ ನವಲೂರ ಎಂಬ ವ್ಯಕ್ತಿ ಕಳೆದ ಎರಡು ದಿನಗಳ ಹಿಂದೆ ಈ ಎಸ್‍ಬಿಐ ಎಟಿಎಂನಲ್ಲಿ 10 ಸಾವಿರ ರೂಪಾಯಿ ಡ್ರಾ ಮಾಡಿದ್ದರು.ಆದರೆ ಅವುಗಳು ಕಲರ್ ಕಲರ್ ಆಗಿದ್ದನ್ನು ನೋಡಿ, ಚೆಕ್ ಮಾಡಿದ್ರೆ ತುಕ್ಕು ಹಿಡಿದ ಕಬ್ಬಿಣದಂತೆ ನೋಟಿನ ಮೇಲೆ ಬಣ್ಣ ಹತ್ತಿದೆ.

ಆಸ್ಪತ್ರೆಗೆ ಹಣ ಬೇಕು ಎಂದು ಡ್ರಾ ಮಾಡಿದ್ದ ಈ ವ್ಯಕ್ತಿಗೆ ಬೇರೆ ಕಡೆ ಹೋಗಿ ನೋಟು ಬದಲಾವಣೆ ಮಾಡಲು ಅವಕಾಶ ಇರಲಿಲ್ಲ. ಹೀಗಾಗಿ ಈ ರೀತಿಯ ನೋಟು ಬಂದಿದ್ದರಿಂದ ಈ ವ್ಯಕ್ತಿ ಪರದಾಟ ನಡೆಸಬೇಕಾಯಿತು. ಅದಕ್ಕೆ ಈ ರೀತಿಯ ನೋಟು ಹಾಕುವವರು ನೋಡಿ ಎಟಿಎಂನಲ್ಲಿ ಹಾಕಬೇಕು. ಇಲ್ಲದೇ ಇದ್ದಲ್ಲಿ ತುರ್ತು ಪರಿಸ್ಥಿತಿ ಇದ್ದವರಿಗೆ ಇದು ದೊಡ್ಡ ಕಷ್ಟ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ