Breaking News

ರಾಹುಲ್ ಗಾಂಧಿ’ಗೆ ಮತ್ತೊಂದು ಶಾಕ್ ; ‘ಸರ್ಕಾರಿ ಬಂಗಲೆ’ ಖಾಲಿ ಮಾಡುವಂತೆ ನೋಟೀಸ್

Spread the love

ವದೆಹಲಿ : ಸರ್ಕಾರಿ ಬಂಗಲೆ ತೊರೆಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೋಟಿಸ್ ನೀಡಲಾಗಿದ್ದು, ಸಂಸತ್ತಿನ ಸದಸ್ಯತ್ವದ ನಂತರ ಲೋಕಸಭೆಯ ಸದನ ಸಮಿತಿ ಈ ಸೂಚನೆ ನೀಡಿದೆ. ರಾಹುಲ್ ಗಾಂಧಿ 12 ತುಘಲಕ್ ಲೇನ್‌ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.

ಏಪ್ರಿಲ್ 22 ರೊಳಗೆ ರಾಹುಲ್ ಗಾಂಧಿ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಬೇಕಾಗುತ್ತದೆ. ನೋಟಿಸ್ ಪ್ರಕಾರ, ಅನರ್ಹಗೊಂಡ ಒಂದು ತಿಂಗಳೊಳಗೆ ರಾಹುಲ್ ಗಾಂಧಿ ತಮ್ಮ ಅಧಿಕೃತ ನಿವಾಸವನ್ನ ಖಾಲಿ ಮಾಡಬೇಕು.

 

 

‘ಮೋದಿ ಉಪನಾಮ’ಕ್ಕೆ ಸಂಬಂಧಿಸಿದ ಟೀಕೆಗಳ ವಿರುದ್ಧ 2019ರಲ್ಲಿ ದಾಖಲಿಸಲಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸೂರತ್ ನ್ಯಾಯಾಲಯ ಗುರುವಾರ ದೋಷಿ ಎಂದು ಘೋಷಿಸಿತು ಮತ್ತು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದಾದ ಬಳಿಕ ಶುಕ್ರವಾರ ರಾಹುಲ್ ಗಾಂಧಿ ಅವರನ್ನ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.

ಲೋಕಸಭೆ ಸೆಕ್ರೆಟರಿಯೇಟ್ ಹೊರಡಿಸಿರುವ ಅಧಿಸೂಚನೆಯಲ್ಲಿ ಅವರ ಅನರ್ಹತೆಯ ಆದೇಶ ಮಾರ್ಚ್ 23 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ರಾಹುಲ್ ಗಾಂಧಿ ಸಂವಿಧಾನದ 102 (1) ಮತ್ತು ಪ್ರಜಾಪ್ರತಿನಿಧಿ ಕಾಯ್ದೆ, 1951 ರ ಸೆಕ್ಷನ್ 8 ರ ಅಡಿಯಲ್ಲಿ ಅನರ್ಹರಾಗಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಲೋಕಸಭೆಯಿಂದ ಅನರ್ಹಗೊಂಡ ಒಂದು ದಿನದ ನಂತರ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸತ್ತಿನ ಸದಸ್ಯರಾಗಿ ಉಳಿಯಲಿ ಅಥವಾ ಇಲ್ಲದಿರಲಿ, ಅಥವಾ ಅವರನ್ನ ಜೈಲಿಗೆ ಹಾಕಿದರೂ ಪ್ರಜಾಪ್ರಭುತ್ವಕ್ಕಾಗಿ ಹೋರಾಟವನ್ನ ಮುಂದುವರಿಸುತ್ತೇನೆ ಎಂದು ಶನಿವಾರ ಹೇಳಿದ್ದಾರೆ. ನಾನು ಹೆದರುವುದಿಲ್ಲ ಮತ್ತು ಕ್ಷಮೆಯಾಚಿಸುವುದಿಲ್ಲ ಏಕೆಂದರೆ ನನ್ನ ಹೆಸರು ಗಾಂಧಿ, ಸಾವರ್ಕರ್ ಅಲ್ಲ ಮತ್ತು ಗಾಂಧಿ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದರು.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ