Breaking News

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ, ಜೆಡಿಎಸ್ ಕಿಂಗ್ ಮೇಕರ್: ಕರ್ನಾಟಕ ಟಿವಿ ಸಮೀಕ್ಷೆ

Spread the love

ಬೆಂಗಳೂರು, ಮಾರ್ಚ್. 27: ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಇದರ ನಡುವೆ ಹಲವು ವೇದಿಕೆಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿದ್ದು, ಒಂದೊಂದು ವಿಭಿನ್ನ ರೀತಿಯ ಫಲಿತಾಂಶ ನೀಡುತ್ತಿವೆ.

ಸಮೀಕ್ಷೆ ನಡೆಸಿರುವ ಕರ್ನಾಟಕ ಟಿವಿ ಯಾರಿಗೂ ಸ್ಪಷ್ಟ ಬಹುಮತ ನೀಡಿಲ್ಲ.

ಹೌದು ಕರ್ನಾಟಕ ಟಿವಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಆದರೆ, ಜಾತ್ಯಾತೀತ ಜನತಾದಳ ಈ ಬಾರಿಯು ಕಿಂಗ್ ಮೇಕರ್ ಆಗಲಿದೆ ಎಂಬ ಅಂಶವನ್ನು ನೀಡಿದೆ. ಈ ಮೂಲಕ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಜನ ಬೆಂಬಲ ಇನ್ನೂ ಇದ್ದು, ಮಾಜಿ ಸಿಎಂ ಕುಮಾರಸ್ವಾಂಇ ಅವರ ಪಂಚರತ್ನ ರಥ ಯಾತ್ರೆ ವ್ಯರ್ಥ್ಯವಾಗಿಲ್ಲ ಎಂಬುದನ್ನು ಸೂಚಿಸುತ್ತಿದೆ.

224 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರಲು ಕನಿಷ್ಟ 113 ಸ್ಥಾನಗಳು ಬೇಕಾಗುತ್ತದೆ. ಈಗಾಗಲೇ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು 130 ರಿಂದ 140 ಸೀಟು ಗೆಲ್ಲುವ ಮೂಲಕ ನಾವು ಅಧಿಕಾರಕ್ಕೆ ಬರುತ್ತೇವೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯ ಇಲ್ಲ ಎಂದು ಹೇಳಿದೆ.

 

ವಿಧಾನಸಭೆ ಚುನಾವಣೆ ಕುರಿತ ಕರ್ನಾಟಕ ಟಿವಿ ಅಭಿಪ್ರಾಯ ಸಂಗ್ರಹದಲ್ಲಿ ಆಡಳಿತರೂಢ ಭಾರತೀಯ ಜನತಾ ಪಕ್ಷ ( ಬಿಜೆಪಿ) 107 ಸ್ಥಾನಗಳನ್ನು ಪಡೆಯಲಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 75 ಸ್ಥಾನಗಳಿಗೆ ತೃಪ್ತಿಯಾಗಬೇಕಿದೆ. ಇನ್ನೂ ಆಶ್ವರ್ಯವಾಗಿ ಜಾತ್ಯಾತೀತ ಜನತಾದಳ (ಜೆಡಿಎಸ್) 36 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದ್ದು, ಇತರರು 6 ಸ್ಥಾನಗಳಲ್ಲಿ ಆರಿಸಿ ಬರಲಿದ್ದಾರೆ ಎಂದು ಅಭಿಪ್ರಾಯ ಪಟ್ಟಿದೆ. ಈ ಆರು ಮಂದಿ ಎಎಪಿ, ಕೆಆರ್‌ಎಸ್‌, ಜನಾರ್ದನ ರೆಡ್ಡಿ ಪಕ್ಷ ಸೇರಿ ಯಾವುದೇ ಪಕ್ಷವಾಗಬಹುದು.

ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಷ್ಟು ಸಂಪನ್ಮೂಲಗಳಿಲ್ಲದ ಜೆಡಿಎಸ್ 25 ಸ್ಥಾನಗಳನ್ನು ದಾಟುವುದಿಲ್ಲ ಎಂಬ ಬಗ್‌ಎಗ ರಾಜಜ್ಯದಲ್ಲಿ ಚರ್ಚೆಗಳಾಗುತ್ತಿವೆ ಈ ಹೊತ್ತಿನಲ್ಲಿ ಕರ್ನಾಟಕ ಟಿವಿ 36 ಸ್ಥಾನಗಳನ್ನು ಜೆಡಿಎಸ್ ಪಡೆಯಲಿದೆ ಎಂದು ತಿಳಿಸಿದೆ. ಇದೇ ರೀತಿ ಫಲಿತಾಂಶ ಬಂದರೆ, ರಾಷ್ಟ್ರೀಯ ಪಕ್ಷಗಳು ಮತ್ತೆ ಪ್ರಾದೇಶಿಕ ಪಕ್ಷದ ಸಹಾಯವನ್ನು ಕೇಳಬೇಕಾಗುತ್ತದೆ.

ಚುನಾವಣಾ ಪೂರ್ವ ಸಮೀಕ್ಷೆಯ ಪ್ರದೇಶವಾರು ಲೆಕ್ಕಾಚಾರ ಹೀಗಿದೆ.

*ಕಿತ್ತೂರು ಕರ್ನಾಟಕ ಪ್ರದೇಶ*

ಬಿಜೆಪಿ: 30

ಕಾಂಗ್ರೆಸ್: 19

ಇತರರು: 1

ಈ ಭಾಗದಲ್ಲಿ ಜೆಡಿಎಸ್ ಒಂದೂ ಸ್ಥಾನವನ್ನು ಗೆಲ್ಲುವುದಿಲ್ಲ ಎಂದಿದೆ.

*ಕಲ್ಯಾಣ ಕರ್ನಾಟಕ ಪ್ರದೇಶ*

ಬಿಜೆಪಿ: 14

ಕಾಂಗ್ರೆಸ್: 22

ಜೆಡಿಎಸ್: 4

ಇತರರು: 1

*ಕರಾವಳಿ ಕರ್ನಾಟಕ ಭಾಗ*

ಬಿಜೆಪಿ: 15

ಕಾಂಗ್ರೆಸ್: 4

*ಮಧ್ಯ ಕರ್ನಾಟಕ ಭಾಗ*

ಬಿಜೆಪಿ: 14

ಕಾಂಗ್ರೆಸ್: 5

ಜೆಡಿಎಸ್: 5

ಇತರರು: 1

* ರಾಜಧಾನಿ ಬೆಂಗಳೂರು*

ಬಿಜೆಪಿ: 16

ಕಾಂಗ್ರೆಸ್: 9

ಜೆಡಿಎಸ್: 2

ಇತರರು: 1

*ಹಳೆಯ ಮೈಸೂರು ಭಾಗ*

ಬಿಜೆಪಿ: 18

ಕಾಂಗ್ರೆಸ್: 16

ಜೆಡಿಎಸ್: 25

ಇತರರು: 2


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ