ಧೂಳಿನಿಂದ ಆಕಾಶ ಕಾಣಿಸದಂತಾದ ಹಿನ್ನಲೆ ಮತ್ತೆ ಲ್ಯಾಂಡಿಂಗ್ ಮಾಡಲಾಗಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್ ನೋಡಿ ಆತಂಕಗೊಂಡ ಪೊಲೀಸರು ಕೂಡಲೆ ಸ್ಥಳಕ್ಕೆ ಧಾವಿಸಿದರು. ಆದರೆ, ಬಳಿಕ ಮತ್ತೊಮ್ಮೆ ಟೇಕ್ ಆಫ್ ಆಗಿ ಹೆಲಿಕಾಪ್ಟರ್ ಹಾರಾಟ ನಡೆಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಡಾ. ಕೆ ಸುಧಾಕರ್ ಚಿಕ್ಕಬಳ್ಳಾಪುರದಿಂದ ರಾಮನಗರಕ್ಕೆ ತೆರಳಲೆಂದು ಹೆಲಿಕಾಪ್ಟರ್ ಹತ್ತಿದ್ದರು. ಟೇಕ್ ಆಫ್ ಆಗುವ ವೇಳೆಗೆ, ಹೆಲಿಕಾಪಟ್ಟರ್ ಪ್ಯಾನ್ ಗಾಳಿಯಿಂದ ದೂಳು ಎದ್ದಿದೆ. ಆಗ ಚಾಲಕನಿಗೆ ಆಕಾಶ ಕಾಣದ ಹಿನ್ನೆಲೆ ಮತ್ತೆ ಲ್ಯಾಂಡ್ ಮಾಡಿದ್ದಾರೆ. ಇದನ್ನು ಕಂಡ ಪೊಲೀಸರು ಕೂಡಲೆ ಸ್ಥಳಕ್ಕೆ ತೆರಳುವಷ್ಟರಲ್ಲಿ, ಹೆಲಿಕಾಪ್ಟರ್ ಮತ್ತೆ ಟೇಕ್ ಆಫ್ ಆಗಿ ಪ್ರಯಾಣ ಬೆಳಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಮಾಡಿ
Laxmi News 24×7