Breaking News

ವಾಡಿ: ಹೆದ್ದಾರಿ ಮೇಲೆ ಪೊಲೀಸ್ ಪೇದೆ ಶವ: ಕೊಲೆ ಶಂಕೆ

Spread the love

ವಾಡಿ: ವಾಹನ ಅಪಘಾತ ದೃಶ್ಯ ರೂಪದಂತೆ ಪೊಲೀಸ್ ಪೇದೆಯೋರ್ವರ ಶವ ವಾಡಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ (ಮಾ.20) ಬೆಳಗಿನ ಜಾವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಚಿತ್ತಾಪುರ ತಾಲೂಕಿನ ವಾಡಿ ನಗರ ಪೊಲೀಸ್ ಠಾಣೆಯ ಪೇದೆ ಕರಿಯಪ್ಪ (37) ಮೃತ ದುರ್ದೈವಿ.

ರವಿವಾರ ಯಾದಗಿರಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ ನಾಲವಾರ ಚೆಕ್‌ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸಿದ್ದ ಪೇದೆ ಕರಿಯಪ್ಪ ರಾತ್ರಿ 8 ಗಂಟೆಗೆ ಕರ್ತವ್ಯ ಮುಗಿಸಿ ಅಪರಿಚಿತ ಕಾರಿನಲ್ಲಿ ವಾಡಿ ಪೊಲೀಸ್ ಕ್ವಾಟ್ರಸ್‌ನ ಅವರ ಮನೆಗೆ ತೆರಳಿದ್ದು, ಎಂದಿನಂತೆ ಊಟ ಮಾಡಿ ಮಲಗಿದ್ದರು ಎನ್ನಲಾಗಿದೆ.

ತಡರಾತ್ರಿ ಎದ್ದು ಪುನಃ ನಾಲವಾರ ಚೆಕ್ ಪೋಸ್ಟ್ ಕಡೆಗೆ ಬೈಕ್ ಸವಾರಿ ಹೋದವರು ಸೋಮವಾರ ಬೆಳಗ್ಗೆ ಲಾಡ್ಲಾಪುರ ಗ್ರಾಮ ಸಮೀಪದ ಡಿಗ್ಗಿ ತಾಂಡಾ ಪಕ್ಕದ ಕೂಡು ರಸ್ತೆ ಸಮೀಪ ಶವವಾಗಿ ಪತ್ತೆಯಾಗಿದ್ದಾರೆ.

ಘಟನಾ ಸ್ಥಳದಲ್ಲಿ ಪೇದೆ ಕರಿಯಪ್ಪ ಬಳಸಿದ ಬೈಕ್ ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡಿದಿರಬಹುದು ಅಥವಾ ಅಕ್ರಮ ಮರಳು ಸಾಗಾಣಿಕೆ ವಾಹನ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರಬಹುದು ಎಂಬ ಅನುಮಾನಗಳು ಸಾರ್ವಜನಿಕರನ್ನು ಕಾಡುತ್ತಿದೆ.

ಅಲ್ಲದೆ ಕರ್ತವ್ಯ ಮುಗಿದ ಮೇಲೂ ಪೇದೆ ರಾತ್ರಿ ಈ ಕಡೆ ಏಕೆ ಬಂದರು? ಎಂಬುದು ಪೊಲೀಸ್ ಅಧಿಕಾರಿಗಳ ಸಂಶಯಕ್ಕೂ ಕಾರಣವಾಗಿದೆ.

ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾದ ಇಂಡಿ ತಾಲೂಕಿನ ತೆಗ್ಗಳ್ಳಿ ಗ್ರಾಮದ ಕರಿಯಪ್ಪನಿಗೆ ಪತ್ನಿ, ಒರ್ವ ಪುತ್ರಿ, ಒರ್ವ ಪುತ್ರ ಇದ್ದಾರೆ. ಡಿವೈಎಸ್ಪಿ, ಸಿಪಿಐ, ಪಿಎಸ್‌ಐ ಸುದರ್ಶನ್ ರೆಡ್ಡಿ ಭೇಟಿ ನೀಡಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ