Breaking News

4 ವರ್ಷಗಳ ಬಳಿಕ ಬೆಂಗಳೂರಿನಲ್ಲಿ IPL ಪಂದ್ಯಗಳು: ಟಿಕೆಟ್​ ಖರೀದಿ ಜೋರು

Spread the love

ಬೆಂಗಳೂರು: ನಾಲ್ಕು ವರ್ಷಗಳ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐಪಿಎಲ್​ ಪಂದ್ಯಗಳ ನಡೆಯಲಿದ್ದು, ಟಿಕೆಟ್​ ಖರೀದಿಗಾಗಿ ರಾಯಲ್​ ಚಾಲೆಂಜರ್ಸ್​ ಅಭಿಮಾನಿಗಳು ಟಿಕೆಟ್​ ಖರೀದಿಗಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.

 

ಏಪ್ರಿಲ್ 2ರಂದು ಹಾಗೂ ಏಪ್ರಿಲ್​ 10 ರಂದು ನಡೆಯುವ ಎರಡು ಪಂದ್ಯಗಳಿಗಾಗಿ ಟಿಕೆಟ್ ಖರೀದಿಗೆ ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಏಪ್ರಿಲ್ 2 ರಂದು ಆರ್​ಸಿಬಿ‌ ಹಾಗೂ ಮುಂಬೈ ನಡುವೆ ನಡೆಯಲಿದೆ ಮತ್ತು ಏಪ್ರಿಲ್ 10 ರಂದು ಆರ್​ಸಿಬಿ‌ ಹಾಗೂ ಲಖನೌ ನಡುವೆ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯದ ಟಿಕೆಟ್ ದರ 2300 ರೂ.ನಿಂದ ಆರಂಭವಾಗಲಿದೆ. ಆನ್​​​ಲೈನ್​ನಲ್ಲಿಯೂ ಟಿಕೆಟ್​ ದರ 2,300 ರೂ. ಇದೆ. ಬೆಳಗ್ಗೆ 10.30ರಿಂದ ಟಿಕೆಟ್ ವಿತರಣೆ ಆರಂಭವಾಗಲಿದೆ. ರಾತ್ರಿಯೇ ಸ್ಟೇಡಿಯಂ ಬಳಿ‌ ಬಂದು ಅಭಿಮಾನಿಗಳು ನಿಂತಿದ್ದಾರೆ. ಕಿಲೋಮೀಟರ್​ಗಟ್ಟಲೆ ಯುವಕ ಹಾಗೂ ಯುವತಿಯರು ಟಿಕೆಟ್​​ಗಾಗಿ ಸಾಲಿನಲ್ಲಿ ನಿಂತಿದ್ದಾರೆ.

 

ಗೇಟ್ ನಂಬರ್ 18ರಲ್ಲಿ ಎರಡು ಪಂದ್ಯದ ಟಿಕೆಟ್ ಮಾರಾಟವಾಗಲಿದೆ. ಒಬ್ಬರಿಗೆ ಒಂದು ಟಿಕೆಟ್ ಮಾತ್ರ ವಿತರಣೆ ಮಾಡಲಾಗುತ್ತಿದೆ. ಬಹಳ ವರ್ಷಗಳ ನಂತರ ಇದೀಗ ಬೆಂಗಳೂರಿನಲ್ಲಿ ಐಪಿಎಲ್​ ಪಂದ್ಯಗಳು ನಡೆಯಲಿದ್ದು, ಅಭಿಮಾನಿಗಳ ಪಾಲಿಗೆ ಖುಷಿ ತಂದಿದೆ.

ಅಭಿಮಾನಿಗಳ ಆಕ್ರೋಶ
ಐಪಿಎಲ್​ ಮ್ಯಾನೇಜ್ಮೆಂಟ್ ಗೇಟ್​ ನಂಬರ್​ 18 ಅಥಾವ 19 ಅಂತ ಮಾಹಿತಿ ನೀಡಿದೆ. ಆದರೆ, ಟಿಕೆಟ್​ಗಾಗಿ ಸಾಲುಗಟ್ಟಿ ನಿಂತಿರುವ ಅಭಿಮಾನಿಗಳಲ್ಲಿ ಗೊಂದಲ ಶುರುವಾಗಿದೆ. ಗೇಟ್ 19ರಲ್ಲಿ ಏಪ್ರಿಲ್ 10ರಂದು ನಡೆಯುವ ಲಖನೌ ಮತ್ತು ಆರ್​ಸಿಬಿ ಪಂದ್ಯದ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಗೇಟ್ ನಂಬರ್ 18ರಲ್ಲಿ ಆರ್​ಸಿಬಿ-ಮುಂಬೈ ಪಂದ್ಯದ ಟಿಕೆಟ್‌ ನೀಡಲಾಗ್ತಿದೆ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಅಭಿಮಾನಿಗಳಿಗೆ ಗೊಂದಲ ಶುರುವಾಗಿದೆ. ರಾತ್ರಿಯೇ ಬಂದು ಸಾಲಿನಲ್ಲಿ ನಿಂತಿದ್ದೇವೆ. ಈಗ ನಮಗೆ ಬೇಕಾದ ಪಂದ್ಯದ ಟಿಕೆಟ್ ನೀಡ್ತಿಲ್ಲ ಎಂದು ಆಯೋಜಕರ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ