Breaking News

ಅಂಕೋಲಾ ಹಾಗೂ ಭಟ್ಕಳ ನಿಲ್ದಾಣಗಳಲ್ಲಿ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಅನುಮತಿ

Spread the love

ಶಿರಸಿ: ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರ ಕೋರಿಕೆಯ ಮೇರೆಗೆ ಅಂಕೋಲಾ ಹಾಗೂ ಭಟ್ಕಳ ನಿಲ್ದಾಣಗಳಲ್ಲಿ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಅನುಮತಿ ನೀಡಿದೆ.

ಅಂಕೋಲಾ ನಿಲ್ದಾಣದಲ್ಲಿ ನಾಳೆ(ಮಾ.9)ಯಿಂದ ಕೊಚುವೆಲಿ- ಮುಂಬೈ ಎಕ್ಸ್ ಪ್ರೆಸ್ ರೈಲು ನಿಲುಗಡೆಯಾಗಲಿದೆ. ಭಟ್ಕಳ ನಿಲ್ದಾಣದಲ್ಲಿ ತಿರುವಂತನಪುರ-ಪನವೇಲ್ ನೇತ್ರಾವತಿ ಎಕ್ಸ್ ಪ್ರೆಸ್ ರೈಲು ನಿಲುಗಡೆಯಾಗಲಿದೆ.

ಈ ಮೂಲಕ ಅಂಕೋಲಾ‌ ಹಾಗೂ ಭಟ್ಕಳ ಭಾಗದ ಜನರ ದೀರ್ಘ ಕಾಲದ ಬೇಡಿಕೆಯನ್ನು ರೈಲ್ವೆ ಇಲಾಖೆ ಈಡೇರಿಸಿದಂತಾಗಿದೆ. ಈ ರೈಲುಗಳ ನಿಲುಗಡೆಗಾಗಿ ಈ ಹಿಂದೆ ಜನ ಮನವಿ ಮಾಡಿಕೊಂಡಿದ್ದ ಮೇರೆಗೆ ಅನಂತಕುಮಾರ ಹೆಗಡೆ ಅವರು ಬೇಡಿಕೆ ಈಡೇರಿಸಲು ಕೋರಿ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದರು. ಈ ರೈಲುಗಳ ನಿಲುಗಡೆಯಿಂದ ಕೇರಳ ಹಾಗೂ ಮುಂಬೈ ಕಡೆ ಹೋಗುವ ಹಾಗೂ ಬರುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಅದೇ ರೀತಿ ಹಿಸ್ಸಾರ್-ಕೊಯಿಮತ್ತೂರು ರೈಲಿಗೆ ಕುಮಟಾದಲ್ಲಿ ನಿಲುಗಡೆ ಕುರಿತ ಆದೇಶ ಸದ್ಯವೇ ಹೊರಡುವ ನಿರೀಕ್ಷೆ ಇದೆ ಎಂದು ಸಂಸದರ ಅನಂತ ಕುಮಾರ್‌ ಹೆಗಡೆ ಕಚೇರಿ ಪ್ರಕಟಣೆ ತಿಳಿಸಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ