Breaking News

ಯುವ ರಾಜಕುಮಾರ ಮೊದಲ ಸಿನಿಮಾಗೆ ನಾಯಕಿ ಫೈನಲ್ : ಯಾರು ಈ ಲಕ್ಕಿ ಗರ್ಲ್?

Spread the love

ದೊಡ್ಮನೆ ಅಭಿಮಾನಿಗಳ ಪಾಲಿನ ಯುಗಾದಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮ ದಿನದಂದೆ ಸೆಟ್ಟೇರಲಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸ ಮುಗಿಸಿರೋ ಸಂತೋಷ್ ಚಿತ್ರಕ್ಕೆ ಪವರ್ ಫುಲ್ ಟೈಟಲ್ ಫಿಕ್ಸ್ ಮಾಡಿಕೊಂಡಿದ್ದಾರೆ.

ಜೊತೆಗೆ ನಾಯಕಿಯನ್ನು ಫಿಕ್ಸ್ ಮಾಡಿಕೊಂಡಿದ್ದಾರೆ. ಸಂತಸದ ವಿಷ್ಯ ಅಂದ್ರೆ ಸಂತೋಷ್ ಆನಂದ್ ರಾಮ್ ನುಡಿದಂತೆ ಕನ್ನಡತಿಯನ್ನೆ ಯುವಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡ್ಕೊಂಡಿದ್ದಾರೆ. ಹಾಗಾದ್ರೆ ಅಣ್ಣಾವ್ರ ಮೊಮ್ಮಗನ ಮೊದಲ ಚಿತ್ರದ ಅವಕಾಶ ಗಿಟ್ಟಿಸಿದ ಆ ಲಕ್ಕಿ ಹುಡುಗಿ ಯಾರು ಅಂತ ಗೊತ್ತಾಗ್ಬೇಕಾ? ಮುಂದೆ ಓದಿ.

ದೊಡ್ಮನೆ ಕುಡಿಯುವ ರಾಜ್ ಕುಮಾರ್ಸ್ಯಾಂಡಲ್ ವುಡ್ ಎಂಟ್ರಿಗೆ ಭರ್ಜರಿ ತಯಾರಿ ನಡೆಯುತ್ತಿದೆ..ಅತ್ತ ಯುವ ದೇಹ ದಂಡಿಸಿ ಪಾತ್ರಕ್ಕೆ ಹೊಂದುವಂತೆ ರೆಡಿಯಾಗ್ತಿದ್ರೆ..ಇತ್ತ ಯುವನಿಗೆ ಸೂಟ್ ಆಗುವಂತ ನಾಯಕಿಯ ಹುಡುಕಾಟದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಬ್ಯುಸಿಯಾಗಿದ್ರು…ಯುವ ಚಿತ್ರದ ಮೂಲಕ ಮಾಲಾಶ್ರೀ ಮಗಳು, ಸುಧಾರಾಣಿ ಮಗಳು ಉಪ್ಪಿ ಮಗಳು ನಾಯಕಿಯಾಗಿ ಬಣ್ಣ ಹಚ್ತಾರೆ ಅನ್ನೋ ವಿಚಾರ ಸಖತ್ ಸುದ್ದಿಯಾಗಿತ್ತು..

ಅದ್ರೆ ಅವರ್ಯಾರು ಯುವ ಮೊದಲ ಚಿತ್ರದ ಪಾತ್ರಕ್ಕೆ ಹೊಂದುವುದಿಲ್ಲ ಅನ್ನೋ ಕಾರಣಕ್ಕೆ ಚಿತ್ರತಂಡ ಸೈಲೆಂಟ್ ಆಗಿತ್ತು.. ಅಲ್ಲದೆ ಯುವನಿಗಾಗಿ ಮಲೆಯಾಳಂನ ಬೆಡಗಿ ಕಲ್ಯಾಣಿ ಪ್ರಿಯದರ್ಶಿನಯನ್ನ ಚಿತ್ರತಂಡ ಫೈನಲ್ ಮಾಡ್ಕೊಂಡಿದ್ರು. ಅದರೆ ಕಲ್ಯಾಣಿ ಬ್ಯುಸಿಯಿದ್ದ ಕಾರಣ ಕಲ್ಯಾಣಿ ಹೆಸರನ್ನ ಕೈ ಬಿಟ್ಟ ಸಂತೋಷ್ ಆನಂದ್ ರಾಮ್ ಕನ್ನಡದ ನಟಿಯನ್ನೆ ಯುವನಿಗೆ ನಾಯಕಿಯಾಗಿ ಫೈನಲ್ ಮಾಡಿದ್ಧಾರೆ.

ಹೌದುಕನ್ನಡಿಗರ ಅರಾಧ್ಯ ದೈವ ಅಣ್ಣಾವ್ರ ಮೊಮ್ಮಗನ ಮೊದಲ ಸಿನಿಮಾಗೆ ಕನ್ನಡದ ನಟಿಯನ್ನೆ ಕರೆತರಲು ಹೊಂಬಾಳೆ ಫಿಲಂಸ್ ಪಣ ತೊಟ್ಟಿತ್ತು. ಅದಕ್ಕಾಗಿ ಈಗಾಗಲೇ ಮಾಲಾಶ್ರೀ ಮಗಳು ರಾಧನ ಸುಧಾರಾಣಿ ಪುತ್ರಿ‌. ಉಪ್ಪಿ ಮಗಳು ಇವರಲ್ಲಿ ಯಾರನ್ನಾದ್ರು ಒಬ್ಬರ‌ನ್ನ ನಾಯಕಿಯಾಗಿ ಪರಿಚಯ ಮಾಡಿಸಲು ಪ್ಲಾನ್ ಮಾಡಿದ್ರು. ಅದ್ರೆ ಯುವ ಸಿನಿಮಾದ ಪಾತ್ರಕ್ಕೆ ಇವರು ಮ್ಯಾಚ್ ಆಗದ ಕಾರಣ ಹೊಸ ಮುಖದ ಹುಡುಕಾಟದಲ್ಲಿದ್ದ ಹೊಂಬಾಳೆ ಬಳಗಕ್ಕೆ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿರೋ ರುಕ್ಮಿಣಿ ವಸಂತ್ ಕಣ್ಣಿಗೆ ಬಿದ್ದಿದ್ದು, ಚಿತ್ರದ ಪಾತ್ರಕ್ಕೆ ರುಕ್ಮಣಿ ಹೊಂದುವ ಕಾರಣ ಈಗ ಯುವ ಮೊದಲ ಚಿತ್ರಕ್ಕೆ ರುಕ್ಮಣಿ ನಾಯಕಿಯಾಗಿ ಫೈನಲ್ ಆಗಿದ್ದಾರೆ ಅನ್ನೋ ಸುದ್ದಿ ಸಿನಿಮಾ ಟೆಂಟ್ ಬಳಗಕ್ಕೆ ಸಿಕ್ಕಿದೆ.

ಬೀರಬಲ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಲಗಾಲಿಟ್ಟು, ನಂತರ ಸಪ್ತಸಾಗರದಾಚೆ ಎಲ್ಲೋ, ಹಾಗೂ ಗಣೇಶ್ ಅಭಿನಯದ ಬಾನದಾರಿಯಲ್ಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅಂಬೆ ಗಾಲಿಡ್ತಿರುವ ರುಕ್ಮಿಣಿ ವಸಂತ್ ಗೆ ಹೊಂಬಾಳೆ ಫಿಲಂಸ್ ನ ಅದೃಷ್ಠದ ಬಾಗಿಲು ತೆರೆದಿದೆ. ಯುವ ಚಿತ್ರಕ್ಕೆ ಫೈನಲ್ ಆಗಿದ್ದ ಕಲ್ಯಾಣಿ ಡೇಟ್ ಕ್ಲಾಶ್ ಆದ ಕಾರಣ ಈಗ ಆ ಜಾಗಕ್ಕೆ ರುಕ್ಮಿಣಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಕನ್ನಡದ ನಟಿಯನ್ನೆ ಯುವ ಚಿತ್ರಕ್ಕೆ ಕರ್ಕೊಂಡ್ ಬರಬೇಕು ಅನ್ನುವ ಸಂತೋಷ್ ಆನಂದ್ ರಾಮ್ ಕನಸು ನನಸ್ಸಾಗಿದೆ. ಇದಲ್ಲದೆ ಸದ್ದಿಲ್ಲದೆ ಸಂತೋಷ್ ಯುವ ಚಿತ್ರದ ಟೀಸರ್ ಶೂಟ್ ಪ್ಲಾನ್ ಮಾಡ್ತಿದ್ದು, ಈ ತಿಂಗಳ ಅಂತ್ಯದೊಳಗೆ ಟೀಸರ್ ಶೂಟಿಂಗ್ ಶುರು ಮಾಡಲಿದ್ದಾರೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ