ರಾಯಚೂರು: ರಾಜಕೀಯ ಕ್ಷೇತ್ರಕ್ಕೆ ಇಂಥವರೇ ಬರಬೇಕು ಎಂಬ ನಿಯಮವಿಲ್ಲ. ರಾಜಕೀಯದಲ್ಲಿ ಜನಪರ ಕಾಳಜಿ ಇರುವ ಧರ್ಮ ಬಂದರೆ ತಪ್ಪಿಲ್ಲ. ಆದರೆ ಧರ್ಮದಲ್ಲಿ ರಾಜಕೀಯ ಬರುವುದು ಸರಿಯಲ್ಲ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರತೀರ್ಥರು ಅಭಿಪ್ರಾಯಪಟ್ಟರು.
ಮಂತ್ರಾಲಯದ ಶ್ರೀಮಠದಲ್ಲಿ ರವಿವಾರ ಸುದ್ದಿಗಾರರ ಜತೆ ಮಾತನಾಡಿ, ರಾಜಕೀಯಕ್ಕೆ ಇಂಥವರೇ ಬರಬೇಕು, ಇಂಥವರು ಬರಬಾರದು ಎಂಬುದಿಲ್ಲ. ರಾಜಕೀಯಕ್ಕೆ ಬರುವ ವ್ಯಕ್ತಿಗಳು ಜನರ ಕಾಳಜಿ ಹೊಂದಿರಬೇಕು ಎಂದು ಹೇಳಿದ ರು.
ಉತ್ತರ ಪ್ರದೇಶದಂತೆ ರಾಜ್ಯ ದಲ್ಲೂ ಬಿಜೆಪಿಯಿಂದ ಸಂತರಿಗೆ ಮುಖ್ಯಮಂತ್ರಿ ಸ್ಥಾನಮಾನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮುಖ್ಯವಾಗಿ ನಾನು ಮೊದಲಿನಿಂದಲೂ ಹೇಳುತ್ತಿರುವುದು ಏನೆಂದರೆ, ಎಲ್ಲರನ್ನು ಒಗ್ಗೂಡಿಸಿ ಕೊಂಡು ಹೋಗುವಂತಹ ವ್ಯಕ್ತಿಗಳು ರಾಜಕೀಯದಲ್ಲಿರಬೇಕು. ರಾಜಕೀಯದಲ್ಲಿ ಧರ್ಮವಿದ್ದರೆ ಉತ್ತಮ ಆಡಳಿತ, ಗುಣಮಟ್ಟದ ವ್ಯವಸ್ಥೆ ನೀಡಲು ಸಹಕಾರಿ ಎಂದರು.
ಮಂತ್ರಾಲಯದಲ್ಲಿ ರಾಯರ ವರ್ಧಂತ್ಯುತ್ಸವ ಸಂಭ್ರಮ
ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 428ನೇ ವರ್ಧಂತ್ಯುತ್ಸವ ರವಿವಾರ ಜರುಗಿತು. ಪಟ್ಟಾಭಿಷೇಕ ಮಹೋತ್ಸವ, ವರ್ಧಂತ್ಯುತ್ಸವ ಸೇರಿದಂತೆ ಆರು ದಿನಗಳ ಕಾಲ ಶ್ರೀರಾಘವೇಂದ್ರ ಗುರು ವೈಭವೋತ್ಸವ ಅದ್ದೂರಿಯಾಗಿ ಜರಗಿತು.