Breaking News

ಅಥಣಿಯ ಸಿಂಗಂ ಎಂದೇ ಖ್ಯಾತಿ ಹೊಂದಿರುವ ಬಸವರಾಜ ರಾಜಕಾರಣದ ಅಖಾಡಕ್ಕೆ ಎಂಟ್ರಿ

Spread the love

ಬೆಳಗಾವಿ: ಕುಡಚಿ ಶಾಸಕ ಪಿ.ರಾಜೀವ್ ಮಾದರಿಯಲ್ಲೇ ಅಥಣಿ ಮತಕ್ಷೇತ್ರಕ್ಕೆ ಮತ್ತೋರ್ವ ಪೋಲಿಸ್ ಅಧಿಕಾರಿ ರಾಜಕಾರಣದ ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯಾರಂತೀರಾ ಇಲ್ಲಿದೆ ನೋಡಿ ಡೀಟೇಲ್ಸ್.

ಅಥಣಿಯಲ್ಲಿ ಪಿಎಸ್ ಐ(PSI) ಆಗಿದ್ದಾಗ ಖಡಕ್ ಪೊಲೀಸ್ ಅಧಿಕಾರಿ ಎಂದೇ ಗುರಿತಿಸಿಕೊಂಡಿದ್ದ ಸದ್ಯ ವಿಜಯಪುರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಿದ ಬಸವರಾಜ ಬೀಸನಕೊಪ್ಪ ಈಗ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

 

ಈ ಹಿಂದೆಯೇ ಬಸವರಾಜ ತಮ್ಮ ಪೊಲೀಸ್ ವೃತ್ತಿ ತೊರೆದು ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು.ಸದ್ಯ ಅಥಣಿ ಮತಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ನಿರ್ಧರಿಸಿರುವ ಅವರು ಈಗಾಗಲೇ ತಮ್ಮ ಸಿಪಿಐ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮಾಜಿ ಡಿಸಿಎಂ ಲಕ್ಷಣ ಸವದಿ, ಶಾಸಕ ಮಹೇಶ್ ಕುಮಠಳ್ಳಿ ಅವರಂತಹ ಘಟಾನುಘಟಿ ರಾಜಕಾರಣಿಗಳನ್ನು ಹೊಂದಿರುವ ಅಥಣಿ ಕ್ಷೇತ್ರಕ್ಕೆ ಸದ್ಯ ಖಡಕ್ ಪೊಲೀಸ್ ಅಧಿಕಾರಿ ಅಥಣಿಯ ಸಿಂಗಂ ಎಂದೇ ಖ್ಯಾತಿ ಹೊಂದಿರುವ ಬಸವರಾಜ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು ಸದ್ಯ ಚುನಾವಣೆಯ ಕಾವು ರಂಗೇರುವಂತೆ ಮಾಡಿದೆ.

ಮೂಲತಃ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಸವರಾಜ ಬೀಸನಕೊಪ್ಪ ಪ್ರಬಲ ಪಂಚಮಸಾಲಿ ಸಮುದಾಯದವರಾಗಿದ್ದು ಅಥಣಿ ಮತಕ್ಷೇತ್ರದಲ್ಲಿ ಪಂಚಮಸಾಲಿ ಮತಗಳು ಜಾಸ್ತಿ ಇದ್ದು ಬಸವರಾಜ ಬೀಸನಕೊಪ್ಪ ಅವರಿಗೆ ಯುವಕರ ತಂಡ ಬೆನ್ನಿಗೆ ನಿಂತಿದೆ. ಈ ಎಲ್ಲಾ ಬೆಳವಣಿಗೆಯಿಂದ ಅಥಣಿ ಚುನಾವಣಾ ಕಾವು ರಂಗು ಪಡೆದಿದ್ದು ಮತದಾರರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಆಶೀರ್ವಾದ ಮಾಡಲಿದ್ದಾನೆ ಎಂದು ಕಾದು ನೋಡಬೇಕಾಗಿದೆ.


Spread the love

About Laxminews 24x7

Check Also

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಏಳು ಆರೋಪಿಗಳ ಪೈಕಿ ಇಬ್ಬರಿಗೆ ಶ್ಯೂರಿಟಿ ಸಿಕ್ಕಿಲ್ಲ.

Spread the loveಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಪಾಲಾಗಿ ಜಾಮೀನು ಪಡೆದಿದ್ದ ಏಳು ಮಂದಿ ಆರೋಪಿಗಳ ಪೈಕಿ ಇಬ್ಬರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ