Breaking News

ಹಣ ಕೊಟ್ಟರೆ ಮಾತ್ರ ಬ್ಲೂಟಿಕ್‌ ಸೇವೆ: ಹೊಸ ನಿಯಮ ಜಾರಿಗೆ ತರಲಿದೆ ಫೇಸ್‌ ಬುಕ್‌ ಮೆಟಾ

Spread the love

ವಾಷಿಂಗ್ಟನ್:‌ ಟ್ವಿಟರ್‌ ನಂತೆ ಫೇಸ್‌ ಬುಕ್‌ ಮೆಟಾ ಕೂಡ ವೆರಿಫೈಡ್‌ ಖಾತೆಗಳಿಗೆ ಮಾಸಿಕ ಶುಲ್ಕವನ್ನು ವಿಧಿಸುವ ಯೋಜನೆಯನ್ನು ಶೀಘ್ರ ಆರಂಭಿಸುವುದಾಗಿ ಮೆಟಾ ಸಿಇಒ‌ ಮಾರ್ಕ್ ಜುಕರ್‌ಬರ್ಗ್ ಭಾನುವಾರ ಘೋಷಿಸಿದ್ದಾರೆ.

ಈ ಬಗ್ಗೆ ಜುಕರ್‌ಬರ್ಗ್ ಈ ವಾರ ನಾವು ಮೆಟಾ ವೆರಿಫೈಡ್‌ ಖಾತೆಗಳಿಗೆ ಶುಲ್ಕವನ್ನು ವಿಧಿಸುವ ಯೋಜನೆಯನ್ನು ಆರಂಭಿಸಲಿದ್ದೇವೆ ಎಂದು ಹೇಳಿದ್ದಾರೆ.

 

ಏನೇನು ಇರಲಿದೆ?: ಈಗಾಗಲೇ ವೆರಿಫೈಡ್‌ ಆಗಿರುವ ಖಾತೆಗಳಿಗೆ ತಿಂಗಳಿಗೆ ಇಂತಿಷ್ಟು ಶುಲ್ಕವನ್ನು ವಿಧಿಸಬೇಕಾಗುತ್ತದೆ. ಅಥವಾ ಹೊಸದಾಗಿ ವೆರಿಪೈಡ್‌ ಆಗುವ ಖಾತೆಗಳು ಶುಲ್ಕವನ್ನು ಪಾವತಿಸಬೇಕು.ಇದರಲ್ಲಿ ಸರ್ಕಾರಿ ದಾಖಲೆಗಳನ್ನು ಪಡೆದುಕೊಂಡು ಖಾತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ವೆರಿಫೈಡ್‌ ಬ್ಯಾಡ್ಜ್‌ ನ್ನು ನೀಡಲಾಗುತ್ತದೆ. ನಕಲಿ ಖಾತೆಯಿಂದ ರಕ್ಷಣೆ ಸಿಗಲಿದೆ. ಉತ್ತಮ ಗ್ರಾಹಕ ಸೇವೆ ಸಿಗಲಿದೆ. ಹೆಚ್ಚು ಜನರಿಗೆ ಖಾತೆ ತಲುಪಲಿದೆ. ಸ್ಟೋರಿ ಹಾಗೂ ಸ್ಟಿಕರ್‌ ಗಳಲ್ಲಿ ಹೆಚ್ಚಿನ ಫೀಚರ್ಸ್‌ ಗಳು ಸಿಗಲಿವೆ. ಆದರೆ ಈ ವೆರಿಫೈಡ್‌ ಖಾತೆಗಳಲ್ಲಿ ಜಾಹೀರಾತುಗಳಿಗೆ ಯಾವುದೇ ಮಿತಿಯನ್ನು ಹಾಕಿಲ್ಲ.ಶುಲ್ಕವೆಷ್ಟು? : ಆರಂಭಿಕವಾಗಿ ವೆರಿಫೈಡ್‌ ಖಾತೆಗಳಿಗೆ ಮಾಸಿಕ ಶುಲ್ಕ ವಿಧಿಸುವ ಯೋಜನೆಯನ್ನು ನ್ಯೂಜಿಲೆಂಡ್‌, ಆಸ್ಟ್ರೇಲಿಯಾದಲ್ಲಿ ಜಾರಿ ಮಾಡಲಾಗುತ್ತದೆ. ವೆಬ್‌ ನಲ್ಲಿ ಮಾಸಿಕವಾಗಿ $11.99 (ಸುಮಾರು ರೂ 990) ರೂ. , ಐಫೋನ್‌ ನಲ್ಲಿ $14.99 (ಸುಮಾರು ರೂ 1,240) ರೂ.ವನ್ನು ನಿಗದಿಪಡಿಸಲಾಗಿದೆ.


Spread the love

About Laxminews 24x7

Check Also

ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡ ಖಾನಾಪುರ ಪೊಲೀಸರು

Spread the loveಬೆಳಗಾವಿ: ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಕಾರಿನಲ್ಲಿ ಖಾನಾಪುರದಿಂದ ಬೆಳಗಾವಿಯತ್ತ ಸಾಗಿಸುತ್ತಿದ್ದಾಗ ದಾಳಿ ಮಾಡಿರುವ ಖಾನಾಪುರ ಪೊಲೀಸರು ಓರ್ವನನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ