Breaking News

ಅಳಿಯನಿಗೆ ಚಾಕು ಹಾಕಿದ ಮಾವ;

Spread the love

ಹುಬ್ಬಳ್ಳಿ: ಸಣ್ಣ ಪುಟ್ಟ ವಿಷಯಗಳಿಗೂ ಚಾಕುವಿನಿಂದ ಇರಿಯುವ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡುವ ಕೃತ್ಯಗಳು ಹುಬ್ಬಳ್ಳಿಯಲ್ಲಿ ಹೆಚ್ಚಾಗುತ್ತಿದೆ. ಇದೀಗ ಚುರುಮುರಿ (Puffed Rice) ವಿಚಾರ ವಿಕೋಪಕ್ಕೆ ಹೋಗಿ ಚಾಕುವಿನಿಂದ ಇರಿದ ಘಟನೆಯೊಂದು ವರದಿಯಾಗಿದೆ.

ತಿನ್ನಲು ಚುರುಮುರಿ ಕೇಳಿದ ಅಳಿಯನಿಗೆ (Son in law) ಬೀಗರ ಮನೆಯವರಿಂದ ಹಲ್ಲೆ ನಡೆದಿದ್ದು, ಚಾಕು ಇರಿತಕ್ಕೊಳದ ಅಳಿಯ ಆಸ್ಪತ್ರೆ ಸೇರಿದ ಘಟನೆ ಹುಬ್ಬಳ್ಳಿಯ (Hubballi) ಇಂದಿರಾ ನಗರದಲ್ಲಿ (Indira Nagara) ನಡೆದಿದೆ.

ಬೆಂಗಳೂರು ಮೂಲದ ಗುರುಶಾಂತಪ್ಪ ಚಾಕು ಇರಿತಕ್ಕೊಳಗಾದ ಅಳಿಯನಾಗಿದ್ದಾನೆ. ತನ್ನ ಹೆಂಡತಿ ಮನೆಗೆ ಎರಡು ದಿನಗಳ ಹಿಂದೆ ಬಂದಿದ್ದ ಗುರುಶಾಂತಪ್ಪ, ಹೆಂಡತಿಗೆ ಚುರುಮುರಿ ಮಾಡಿಕೊಡು ಅಂತ ಕೇಳಿದ್ದ ಎನ್ನಲಾಗಿದೆ. ಈ ವೇಳೆ ನನಗೆ ಚುರುಮುರಿ ಮಾಡಿ ಕೊಡಲು ಆಗೋದಿಲ್ಲ ಅಂತ ಹೆಂಡತಿ ಹೇಳಿದ್ದಳಂತೆ. ಇದರಿಂದಾಗಿ ಗಂಡ- ಹೆಂಡತಿ ನಡುವೆ ಜಗಳ ಆರಂಭಗೊಂಡಿದೆ. ಇದರಿಂದ ಕುಪಿತಗೊಂಡ ಗುರುಶಾಂತಪ್ಪ ಕೋಪದಲ್ಲಿ ಬೀಗರಿಗೆ ಬೈದಿದ್ದಾನೆ.
ಸಾಂದರ್ಭಿಕ ಚಿತ್ರ

ಈ ವೇಳೆ ಮಾವ ಹಾಗೂ ಅಜಯ್ ಎಂಬಾತನಿಂದ ಗುರುಶಾಂತಪ್ಪನ ಮೇಲೆ ಹಲ್ಲೆ ನಡೆದಿದೆ‌. ಮನಸೋಯಿಚ್ಛೆ ಥಳಿಸಿದ ಬೀಗರ ಮನೆಯವರು, ಅಳಿಯನಿಗೆ ಚಾಕುವಿನಿಂದಲೂ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಅಳಿಯ ಗುರುಶಾಂತಪ್ಪನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


Spread the love

About Laxminews 24x7

Check Also

ಮನೆಗೆ ಬಿಡುವ ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ; ಹಠಯೋಗಿ ಲೋಕೇಶ್ವರ ಸ್ವಾಮೀಜಿ ಬಂಧನ

Spread the loveಚಿಕ್ಕೋಡಿ: ವಿದ್ಯಾರ್ಥಿನಿಯನ್ನು ಮನೆಗೆ ಬಿಡುವುದಾಗಿ ಹೇಳಿ ಬೇರೆ ಜಿಲ್ಲೆಗಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಮೇಕಳಿ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ