ಕನಕಪುರ: ಸರ್ಕಾರದಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಲು ಸಾಧ್ಯವಾಗದ ಬಿಜೆಪಿಯ ಸಂಸದರು ಒಳಗೊಳಗೆ ಭಾರಿ ಅವಮಾನ ಎದುರಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಎಂಟರಿಂದ ಹತ್ತು ಬಿಜೆಪಿ ಸಂಸದರು ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
‘ಈ ಸರ್ಕಾರದಲ್ಲಿ ಮಾತನಾಡಲು ನಮಗೆ ಧ್ವನಿ ಇಲ್ಲ ಎಂದು ಬಿಜೆಪಿ ಸಂಸದರು ನನ್ನ ಬಳಿ ನೋವು ತೋಡಿಕೊಂಡಿದ್ದಾರೆ. ಸದ್ಯಕ್ಕೆ ಅವರ ಹೆಸರು ಬೇಡ. ಆ ಸಂಸದರ ಯಾರು ಎಂಬ ಮಾಹಿತಿಯನ್ನು ಮುಂದೊಂದು ದಿನ ಬಹಿರಂಗ ಪಡಿಸುತ್ತೇನೆ’ ಎಂದರು.
ಡಬಲ್ ಇಂಜಿನ್ ಸರ್ಕಾರದಲ್ಲಿ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಒಪ್ಪಿಗೆ ಪಡೆಯಲು ರಾಜ್ಯದ ಬಿಜೆಪಿ ಸಂಸದರಿಂದ ಸಾಧ್ಯವಾಗಿಲ್ಲ. ಹಾಗಾಗಿ ಅವರು ಚುನಾವಣೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದರು.