ಆಕಸ್ಮೀಕವಾಗಿ ಹತ್ತಿದ ಬೆಂಕಿಗೆ ಅಂದಾಜು 20 ಎಕರೆ ಬೆಳೆದು ನಿಂತ ಕಬ್ಬು ಆಹುತಿಯಾದ ಘಟನೆ ಗೋಕಾಕ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ನಡೆದಿದೆ
ಉಪ್ಪಾರಟ್ಟಿಯ ಗ್ರಾಮದ ರೈತರಾದ ವಿಠ್ಠಲ ಚುನ್ನನವರ,ನಾರಾಯಣ ನಂದಿ, ಪುಂಡಲಿಕ್ ದರೆನ್ನವರ್, ರುದ್ರಪ್ಪ ಮುರ್ಕಿ ಭಾವಿ, ಗಂಗಪ್ಪ ಕೊಳವಿ,
ಇವರು ತಮ್ಮ ಹೊಲದಲ್ಲಿನ ಕಬ್ಬು ಇನ್ನೆನು ಕೆಲವೆ ದಿನಗಳಲ್ಲಿ ಕಟಾವು ಮಾಡಿ ಕಾರ್ಖಾನೆಗೆ ಕಳಿಸುವ ವಿಚಾರದಲ್ಲಿದ್ದಾಗ ಇವತ್ತು ಅಪರಾಹ್ನ 12 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದ ಪರಿಣಾಮ ಮೊದಲು ಒಂದು ಮೂಲೆಯಲ್ಲಿ ಹತ್ತಿದ ಬೆಂಕಿ ಬಿಸಿಲಿನ ತಾಪದಿಂದ ಅದು ಸುತ್ತಮುತ್ತಲಿನ ಹೊಲದಲ್ಲಿ ಕಬ್ಬಿಗೆ ಆವರಿಸಿಕೊಂಡಿದೆ,
ಬೆಂಕಿ ನಿಂದಿಸಲು ಸ್ಥಳಿಯರು ಹರಸಾಹಸ ಪಟ್ಟರು ಸಹ ಯಾವುದೆ ಪ್ರಯೋಜನವಾಗಿಲ್ಲ ಇದನ್ನು ನೋಡಿ ಕಬ್ಬು ಬೆಳೆದ ರೈತರ ಅಕ್ರಂದನ ಮುಗಿಲು ಮುಟ್ಟುವಂತಿತ್ತು