Breaking News

2023: ಯಾವುದು ದುಬಾರಿ? ಯಾವುದು ಅಗ್ಗ?

Spread the love

ವದೆಹಲಿ: ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಬುಧವಾರ) ಮಂಡಿಸಿದರು.

ಎನ್‌ಡಿಎ ಸರ್ಕಾರದ ಎರಡನೇ ಅವಧಿಯ ಪೂರ್ಣ ಪ್ರಮಾಣದ ಬಜೆಟ್‌ ಇದಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ಜನಸಾಮಾನ್ಯರು ಬಳಸುವ ಕೆಲವು ಸರಕುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದರೆ, ಇನ್ನು ಹಲವು ಸರಕುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗಿದೆ.

ಬೆಲೆ ಏರಿಕೆಯಾದ ಸರಕುಗಳ ವಿವರ: ಸಿಗರೇಟ್, ಎಲೆಕ್ಟ್ರಿಕ್ ಚಿಮಣಿ, ಆಮದು ಮಾಡಿಕೊಂಡ ರಬ್ಬರ್, ಚಿನ್ನ, ಬೆಳ್ಳಿ, ಬ್ರಾಂಡೆಡ್ ಬಟ್ಟೆಗಳು, ಪ್ಲಾಟಿನಮ್, ಎಕ್ಸ್​ರೇ, ಹೆಡ್​ಫೋನ್, ಇಯರ್ ಫೋನ್, ವೈದ್ಯಕೀಯ ಉತ್ಪನ್ನಗಳು ದುಬಾರಿಯಾಗಲಿವೆ.

ಬೆಲೆ ಕಡಿಮೆಯಾದ ಸರಕುಗಳ ವಿವರ: ಮೊಬೈಲ್ ಫೋನ್, ಲ್ಯಾಪ್‌ಟಾಪ್‌, ಸೈಕಲ್, ಎಲ್​ಇಡಿ ಟಿವಿ, ಟಿವಿ ಪ್ಯಾನಲ್, ಆಟೊಮೊಬೈಲ್, ಜವಳಿ, ಎಲೆಕ್ಟ್ರಿಕ್ ವಾಹನ, ಕ್ಯಾಮೆರಾ ಲೆನ್ಸ್, ಜೈವಿಕ ಅನಿಲ ಆಧಾರಿತ ಉತ್ಪನ್ನಗಳು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ