Breaking News

ಕೇಂದ್ರ ಬಜೆಟ್‌ – 2023; ಮುಖ್ಯಾಂಶಗಳು

Spread the love

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಬಜೆಟ್‌ ಮಂಡನೆ ಮಾಡಿದ್ದು, ಅದರ ಮುಖ್ಯಾಂಶಗಳು ಕೆಳಕಂಡಂತಿವೆ.

* ಐದನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್

* ಮಹಿಳೆಯರು, ಯುವಕರು, ರೈತರು, ಎಸ್ಸಿ/ಎಸ್ಟಿ ಸಮುದಾಯಗಳಿಗೆ ಮನ್ನಣೆ

* ಆಧಾರ್, ಯುಪಿಐ, ಕೋವಿನ್ ಡಿಜಿಟಲೀಕರಣದ ಮೂರು ಸಾಧನೆಗಳಿಗೆ ವಿಶ್ವ ಮಾನ್ಯತೆ

* ಪ್ರಸಕ್ತ ವರ್ಷದಲ್ಲಿ ಆರ್ಥಿಕತೆ ಶೇಕಡ 7 ರಷ್ಟು ವೃದ್ಧಿ

* ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ಮೀಸಲು. ಮುಂದಿನ ಒಂದು ವರ್ಷಕ್ಕೆ ಯೋಜನೆ ವಿಸ್ತರಣೆ

* ಭಾರತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ

* ಉಚಿತ ಆಹಾರ ಧಾನ್ಯ ವಿತರಣೆ ಒಂದು ವರ್ಷ ವಿಸ್ತರಣೆ

* ಈವರೆಗೆ 47 ಕೋಟಿ ಜನಧನ್ ಖಾತೆಗಳು ಆರಂಭವಾಗಿವೆ

* ಕೊರೊನಾ ನಿಯಂತ್ರಣಕ್ಕಾಗಿ 220 ಕೋಟಿ ಡೋಸ್ ವ್ಯಾಕ್ಸಿನ್ ನೀಡಲಾಗಿದೆ

* 14 ಕೋಟಿ ರೈತರಿಗೆ ಈವರೆಗೆ 2.7 ಲಕ್ಷ ಕೋಟಿ ರೂಪಾಯಿ ವಿಮೆ ಹಂಚಿಕೆ

* ಕರಕುಶಲ ಕರ್ಮಿಗಳಿಗೆ ನೂತನ ಯೋಜನೆ

* ಪ್ರಧಾನಿ ವಿಶ್ವಕರ್ಮ ಕೌಶಲ್ಯ ಯೋಜನೆ ಘೋಷಣೆ

* ಸಿರಿ ಧಾನ್ಯಗಳ ಕೃಷಿಗೆ ಹೊಸ ಯೋಜನೆ

* ಕೃಷಿ ಯೋಜನೆಗಳಲ್ಲಿ ಸ್ಟಾರ್ಟ್ ಅಪ್ ಗಳಿಗೆ ಆದ್ಯತೆ

* ಹೈದರಾಬಾದ್ ನಲ್ಲಿ ಸಿರಿಧಾನ್ಯಗಳ ಶ್ರೀ ಅನ್ನ ಸಂಶೋಧನಾ ಕೇಂದ್ರ ಸ್ಥಾಪನೆ

* ದೇಶದ ಸಹಕಾರಿ ಸಂಘಗಳನ್ನು ಒಂದೇ ಸೂರಿನಡಿ ತರಲು ಸಂಕಲ್ಪ

* 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ

* ಮೀನುಗಾರಿಕೆಗೆ 6,000 ಕೋಟಿ ರೂಪಾಯಿ ಮೀಸಲು

* ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಒತ್ತು

* ಶಿಕ್ಷಕರ ತರಬೇತಿಗೆ ಆದ್ಯತೆ, ಜಿಲ್ಲಾ ಶಿಕ್ಷಣ ಕೇಂದ್ರಗಳ ಉನ್ನತೀಕರಣ

* ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮ

* ಸಾರ್ವಜನಿಕರಿಗೆ ಪ್ರಾದೇಶಿಕ ಭಾಷೆಯಲ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ

* ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಐಸಿಎಂಆರ್ ಲ್ಯಾಬ್ ಗಳ ಸ್ಥಾಪನೆ‌

* ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ

* 2.40 ಲಕ್ಷ ಕೋಟಿ ರೂಪಾಯಿ ರೈಲ್ವೆಗೆ ಮೀಸಲು


Spread the love

About Laxminews 24x7

Check Also

ಬ್ರಹ್ಮಕುಮಾರಿಸ್ ಜಾಗತಿಕ ಶೃಂಗ ಸಭೆಯಲ್ಲಿ ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಅವರು ಭಾಗಿ

Spread the love ಬ್ರಹ್ಮಕುಮಾರಿಸ್ ಜಾಗತಿಕ ಶೃಂಗ ಸಭೆಯಲ್ಲಿ ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಅವರು ಭಾಗಿ  -ಖಾನಾಪೂರದ ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ