Breaking News

ಸಿಲಿಕಾನ್ ಸಿಟಿಗೆ 300 ಐಷಾರಾಮಿ ಎಲೆಕ್ಟ್ರಿಕ್ ಬಸ್‍ಗಳು ಬರಲಿವೆ

Spread the love

ಬೆಂಗಳೂರು: ಬಿಎಂಟಿಸಿಯ ಬಹು ವರ್ಷಗಳ ಕನಸಿನ ಯೋಜನೆ ನನಸಾಗುತ್ತಿದೆ. ಸಿಲಿಕಾನ್ ಸಿಟಿಗೆ 300 ಐಷಾರಾಮಿ ಎಲೆಕ್ಟ್ರಿಕ್ ಬಸ್‍ಗಳು ಬರಲಿವೆ

300 ಐಷಾರಾಮಿ ಎಲೆಕ್ಟ್ರಿಕ್ ಬಸ್‍ಗಳನ್ನು ಗುತ್ತಿಗೆ ಪಡೆದು ಬಿಎಂಟಿಸಿ ಓಡಿಸಲಿದೆ. ಪ್ರಯೋಗಿಕವಾಗಿ ಬಿಎಂಟಿಸಿಯ ಡಿಪೋ ನಂಬರ್ 7ಕ್ಕೆ ಮೊದಲ ಬಸ್ ಬಂದಿದೆ. 15 ದಿನದ ಬಳಿಕ ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶ ಸಿಗಲಿದೆ. ವಾಯು ಮಾಲಿನ್ಯ ಪ್ರಮಾಣವನ್ನು ಈ ಬಸ್‍ಗಳು ಕಡಿಮೆ ಮಾಡಲಿದ್ದು, 2 ಗಂಟೆ ಚಾರ್ಜ್ ಮಾಡಿದರೆ 120 ಕಿಲೋಮೀಟರ್ ಓಡಿಸಬಹುದಾಗಿದೆ.

ತೆಲಂಗಾಣ ಮೂಲದ ಒಲೆಕ್ಟ್ರಾ (olectra) ಕಂಪನಿಗೆ ಈ ಬಸ್ ಸೇರಿದೆ. ಸದ್ಯ ತಾಂತ್ರಿಕ ದೋಷಗಳನ್ನ ಪತ್ತೆ ಹಚ್ಚಲು ಹಾಗೂ ಸಾಮಥ್ರ್ಯ ತಿಳಿಯಲು ಬಸ್ಸಿನ ಒಳಗೆ ಕ್ಯಾನ್‍ಗಳ ಮೂಲಕ ಗರಿಷ್ಠ ಭಾರವನ್ನ ಹಾಕಿ 15 ದಿನ ಸಂಚಾರ ಮಾಡಲಾಗುತ್ತದೆ. ಅನಂತರ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಒಂದು ಎಲೆಕ್ಟ್ರಿಕ್ ಬಸ್ಸಿನ ಬೆಲೆ ಸುಮಾರು 2 ರಿಂದ 2.80 ಕೋಟಿ ರೂಪಾಯಿ ಆಗಿದೆ. ಈ ಹಿಂದಿನ ಸರ್ಕಾರಗಳು ಬೆಂಗಳೂರಿನ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಬಸ್‍ಗಳನ್ನು ಓಡಿಸಲು ವಿಫಲವಾಗಿದ್ದವು. ಆದರೆ ಇದೀಗ ಮೊದಲ ಬಾರಿಗೆ ಬೆಂಗಳೂರಿಗೆ ಎಲೆಕ್ಟ್ರಿಕ್ ಬಸ್ ಬಂದಿದೆ.

ಎಲೆಕ್ಟ್ರಿಕ್ ಬಸ್ಸಿನ ಪ್ರಯೋಜನಗಳು:
* ವಾಯು ಮಾಲಿನ್ಯ ಪ್ರಮಾಣವನ್ನು ಎಲೆಕ್ಟ್ರಿಕ್ ಬಸ್‍ಗಳು ಕಡಿಮೆ ಮಾಡುತ್ತವೆ
* ಪ್ರಮುಖವಾಗಿ ಇಂಧನ ಉಳಿತಾಯವಾಗುತ್ತದೆ.
* ಈ ಬಸ್ಸನ್ನು 2 ಗಂಟೆ ಚಾರ್ಜ್ ಮಾಡಿದರೆ 120 ಕಿಮೀ ಸಂಚಾರ ಮಾಡಬಹುದು.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ