Home / ರಾಜಕೀಯ / ಹದಿನಾರು ಚುನಾವಣೆ ಕಂಡ ಶತಾಯುಷಿ ಅಜ್ಜಿ

ಹದಿನಾರು ಚುನಾವಣೆ ಕಂಡ ಶತಾಯುಷಿ ಅಜ್ಜಿ

Spread the love

ಕೊಪ್ಪಳ: ದೇಶಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲದಲ್ಲಿರುವ ಹೊತ್ತಲ್ಲಿ ಕಳೆದ 75 ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಿದವರು ಕಾಣಸಿಗೋದು ಬಹಳ ಅಪರೂಪ. ಆದರೆ ಕೊಪ್ಪಳ ಜಿಲ್ಲೆಯ ಶತಾಯುಷಿಯೊಬ್ಬರು 1952ರಿಂದ ನಡೆದ ಎಲ್ಲ ಚುನಾವಣೆಗಳಲ್ಲೂ ಮತದಾನ ಮಾಡಿದ್ದಾರೆ.

 

ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾಮದ ಬಸಮ್ಮ ಮಡಿವಾಳಯ್ಯ ಭೂಸನೂರಮಠ ಮೊದಲ ಚುನಾವಣೆ ಯಿಂದ ಹಿಡಿದು ಈವರೆಗಿನ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆ ಹೀಗೆ ಎಲ್ಲ ಚುನಾವಣೆಗಳಲ್ಲೂ ಮತದಾನದ ಹಕ್ಕು ಚಲಾಯಿಸಿ ದಾಖಲೆ ಬರೆದಿದ್ದಾರೆ. ಇದಕ್ಕಾಗಿ ಚುನಾವಣಾ ಆಯೋಗದ ಗೌರವಕ್ಕೂ ಪಾತ್ರರಾಗಿದ್ದಾರೆ. ಬಸಮ್ಮ ಮೂಲತಃ ಕುಕನೂರು ತಾಲೂಕಿನ ಇಟಗಿ ಗ್ರಾಮದವರು. ಮದುವೆಯಾದ ಬಳಿಕ ಪತಿ ಮಡಿವಾಳಯ್ಯ ಅವರ ಊರು ಅಗಳಕೇರಾದಲ್ಲಿ ನೆಲೆಸಿ ಕೃಷಿ ಜೀವನ ನಡೆಸಿ ಕೊಂಡು ಬಂದಿದ್ದಾರೆ. ವಿಶೇಷವೆಂದರೆ ಬಸಮ್ಮ ಅನಕ್ಷರಸ್ಥೆ. ಆದಾಗ್ಯೂ ಚುನಾವಣೆ ವೇಳೆ ತಾವೂ ಮತದಾನ ಮಾಡಿ, ಇತರರಿಗೂ ಹಕ್ಕು ಚಲಾಯಿಸುವಂತೆ ಜಾಗೃತಿ ಮೂಡಿಸುತ್ತಾರೆ. ಕೊಪ್ಪಳ ಕ್ಷೇತ್ರದ ಮಟ್ಟಿಗೆ 16 ಚುನಾವಣೆಗಳನ್ನು ಕಂಡಿದ್ದಾರೆ. ಇಲ್ಲೊಂದು ಉಪ ಚುನಾವಣೆ ಎದುರಾಗಿದ್ದು, ಅದರಲ್ಲೂ ಬಸಮ್ಮ ಮತದಾನ ಮಾಡಿದ್ದಾರೆ.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ