ಆತ್ಯಾ ಚಾರಕ್ಕೆ ಕೊನೆ ಯಾವಾಗ? ರೈತ ಬೆನ್ನೆಲುಬು ಅನ್ನೋದನ್ನ ಮರೆತು ಬಿಟ್ಟಿದೆಯ ಸರ್ಕಾರ…?
ದೌರ್ಜನ್ಯ ನಡೆದ ಇಡೀ ಗ್ರಾಮದ ಸುತ್ತಲೂ ಖಾಕಿ ಸರ್ಪಗಾವಲಿದೆ. ಗ್ರಾಮದೊಳಕ್ಕೆ ಒಂದು ಇರುವೆ ಕೂಡ ಪ್ರವೇಶಿಸುವಂತಿಲ್ಲ. ಈ ವಿಷಯ ಯಾರಿಗೂ ತಿಳಿಸಕೂಡದು ಎಂದು ಅಲ್ಲಿನ ಜಿಲ್ಲಾಧಿಕಾರಿ ಯುವತಿಯ ಹೆತ್ತವರಿಗೆ ಧಮ್ಕಿ ಇಟ್ಟಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಊರು ಪ್ರವೇಶಿಸದಂತೆ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಸತ್ತ ಮಗಳ ಮುಖವನ್ನು ಹೆತ್ತ ತಾಯಿಗೂ ತೋರಿಸದೇ ಸುಟ್ಟು ಹಾಕಲಾಗಿದೆ. ಇದು ಅತ್ಯಾಚಾರವೇ ಅಲ್ಲ; ಆಕೆಯ ದೇಹದಲ್ಲಿ ಸ್ಪರ್ಮ್ ಇರಲೇ ಇಲ್ಲ ಎಂದು ಈಗಾಗಲೇ ವಿಧಿ ವಿ(ಅ)ಜ್ಞಾನ ಪ್ರಯೋಗಾಲಯದಿಂದ ತಿರುಚಿದ ಮಾಹಿತಿ ಕಕ್ಕಿಸಲಾಗಿದೆ. ಹಾಗಿದ್ರೆ ಆ ಯುವತಿ ತನ್ನ ಬೆನ್ನೆಲುಬು ತಾನೇ ಮುರಿದುಕೊಂಡಳಾ? ತನ್ನ ನಾಲಿಗೆ ತಾನೇ ಕತ್ತರಿಸಿಕೊಂಡಳಾ? ಅದನ್ನೆಲ್ಲಾ ಮಾಡುವಂತೆ ತಾನೇ ಆ ನಾಲ್ವರು ಕೀಚಕರನ್ನು ಕರೆದಳಾ? ಎಲ್ಲ ಮುಗಿದ ಮೇಲೆ ಮಾಧ್ಯಮದ ಮುಂದೆ ಮಾತಾಡಲು ಆಕೆಯ ಪೋಷಕರಿಗೆ ನೀವ್ಯಾಕೆ ಅವಕಾಶ ಕೊಡುತ್ತಿಲ್ಲ?
ನಮ್ಮ ದೇಶದ ನಾಥ ಪಂಥಕ್ಕೆ ಹತ್ತಿದ ದೊಡ್ಡ ಕಳಂಕ. ನಾಯಕರು ಈ ಬಗ್ಗೆ ಈಗಲೂ ಮೌನವಾಗಿದ್ದಾರೆ. ನಿರ್ಭಯಾ ಪ್ರಕರಣದಲ್ಲಿ ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಬಳಸಿ ಹೋರಾಟ ಹತ್ತಿಕ್ಕಿದ ಹೋರಾಟಗಾರರು ಈಗ ನೈತಿಕತೆ ಪ್ರತಿಭಟಿಸಲು ಮುಂದಾಗಿದ್ದಾರೆ.
ರೈತ ಬೆನ್ನೆಲುಬು ಅನ್ನೋದನ್ನ ಮರೆತು ಬಿಟ್ಟಿದೆಯ ಸರ್ಕಾರ…?
ರೈತರನ್ನು ದೇಶದ ಬೆನ್ನೆಲಬು ಅಂತ ಕರೆಯಲಾಗುತ್ತದೆ. ಆದರೆ ವಿದರ್ಭ ವಲಯದಲ್ಲಿ ಕಳೆದ ಕೆಲವು ವರ್ಷಗಳಿಂದ ರೈತರ ಆತ್ಮ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ರೈತರ ಆತ್ಮಹತ್ಯೆಗೆ ಹಲವಾರು ಕಾರಣಗಳಿವೆ.ರಾಷ್ಟ್ರೀಯ ಕೃಷಿ ನೀತಿ ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಇಲ್ಲದೇ ಇರುವುದು ಮತ್ತು ಬೀಜ ಗೊಬ್ಬರ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಇರುವುದು ನಷ್ಟದ ದಾರಿ ತುಳಿದಂತಾಗಿದೆ. ಆಲ್ ಇಂಡಿಯಾ ಕಿಸಾನ್ ಸಂಘರ್ಷ ಸಮಿತಿ, ಭಾರತೀಯ ಕಿಸಾನ್ ಯೂನಿಯನ್, ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಸೇರಿದಂತೆ ರಾಜಕೀಯದಿಂದ ದೂರವಿರುವ ಸಂಘಟನೆಗಳೂ ವಿಧೇಯಕವನ್ನು ವಿರೋಧಿಸಿವೆ.
50 ಸಾವಿರಕ್ಕೂ ಹೆಚ್ಚು ರೈತರು ಪ್ರಧಾನಿಯವರಿಗೆ ವಿಧೇಯಕ ಬೇಡವೆಂದು ಪತ್ರ ಬರೆದಿರುವುದಾಗಿ ಬಿಕೆಎಸ್ ತಿಳಿಸಿದೆ. ಪಂಜಾಬ್, ಮಹಾರಾಷ್ಟ್ರ ಮೊದಲಾದ ಕಡೆಗಳಲ್ಲಿ ರೈತ ಪರ ಸಂಘಟನೆಗಳು ಪ್ರತಿಭಟಿಸಿವೆ. ತಿದ್ದುಪಡೆ ಕಾಯಿದೆ ದಿನಸಿ ಪದಾರ್ಥಗಳ ಖರೀದಿಗೆ ಮತ್ತು ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡುವುದೇ ಈ ಕಾಯಿದೆಯ ಮೂಲ ಉದ್ದೆಶವಾಗಿದೆ. ಈ ಕಾಯಿದೆಯಿಂದ ಬಂಡವಾಳ ಶಾಹಿಗಳಿಗೆ ಮತ್ತು ಕಾರ್ಪೊರೇಟ್ ವಲಯದ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾತ್ರ ಅನುಕೂಲಕರವಾಗಲಿದೆ. ಎಪಿಎಂಸಿ ಮಾರುಕಟ್ಟೆ ದುರ್ಬಲವಾಗಲಿದೆ.ಈ ಹೊಸ ವ್ಯವಸ್ಥೆಯಲ್ಲಿ ರೈತರಿಗೆ ಕೃಷಿ ಉತ್ಪನ್ನ ಮಾರಾಟವಾದ ತಕ್ಷಣ ಹಣ ಸಿಗುವುದು ಕಷ್ಟಕರವಾಗಿದೆ.
ರೈತರಿಗೆ ಅನುಕೂಲ ಆಗುವಂತಹ ಕಾಯಿದೆಗಳು ಕೇಂದ್ರ ಸರ್ಕಾರ ಅನುಮೋದನೆಗೆ ತಂದರೆ ರೈತರ ಸಂಕಷ್ಟಗಳನ್ನು ಮತ್ತು ರೈತರ ಆತ್ಮಹತ್ಯೆಗಳನ್ನು ತಡೆಯಬಹುದಾಗಿದೆ……..
ಇಷ್ಟೊಂದೆಲ್ಲ ಸಮಸ್ಯೆ ಗಳಿದ್ದರು ಮಧ್ಯಮ ಗಳು ಈಕಡೆ ಗಮನ ಕೊಡದೆ ಅನಾವಶ್ಯಕ ವಾದ ವಿಷಯ, ಗಳಾದ ಡ್ರಗ್ಸ್, ಹಾಗೂ ಕೆಲವೊಂದು ಸಿನೆಮಾ ಸ್ಟಾರ್ ಗಳ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ
ರೈತರನ್ನು ಉಗ್ರವಾದಿ ಗಳಂತೆ ನೋಡುತ್ತಿದ್ದರೆ, ಹಾಗೂ ಹೆಣ್ಣು ಮಕ್ಕಳಿಗೆ ಒಂದು ಭೋಗದ ವಸ್ತು ವಂತೆ ಸಮಾಜ ದಲ್ಲಿ ಇನ್ನೂ ಕೆಲವೊಂದು ಜನ ವರ್ತಿಸುತ್ತಿದ್ದರು ಈಕಡೆ ಹೆಚ್ಚಿನ ಗಮನ ಹರಿಸುತ್ತಿಲ್ಲ
ಇನ್ನಾದರೂ ಮಧ್ಯಮ ಗಳು ಜನ ಪ್ರತಿನಿಧಿ ಗಳು, ಹಾಗೂ ಸಂಭಂದ ವಿರುವ ಅಧಿಕಾರಿಗಳು ಇನ್ನುಮುಂದೆ ಆದ್ರೂ ಅನ್ನದಾತನ ಬಗ್ಗೆ ಹಾಗೂ ಹೆಣ್ಣಿನ ಮೇಲೆ ದುಷ್ಕರ್ಮಗಳು ಆಗದಂತೆ ಕಟ್ಟ್ಟೆಚ್ಚಿನ ಕ್ರಮ ವಹಿಸಬೇಕು ಎಂದು ಜನರ ಆಶಯ
ಜೈ ಹಿಂದ್ , ವಂದೇ ಮಾತರಮ್, ಜೈ ಕರ್ನಾಟಕ ಮಾತೆ..