ಬೆಂಗಳೂರು : ಮುಂದಿನ ವಿಧಾನ ಸಭೆ ಚುನಾವಣೆ ಹಿನ್ನೆಲೆ ಸಂಕ್ರಾಂತಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದ್ದು, ಮನೆಮನೆಗಳಿಗೆ ಸಿವಿ ರಾಮನ್ ನಗರದಲ್ಲಿ ಸ್ಥಳೀಯ ಶಾಸಕ ರಘು ಜನ್ರಿಗೆ ತಟ್ಟೆ, ಲೋಟ, ಸ್ಪೂನ್ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಸಿಲಿಕಾನ್ ಸಿಟಿಯ ಕೆಲ ಭಾಗಗಳಲ್ಲಿ ರಾಜಕೀಯ ನಾಯಕರು ಚುನಾವಣೆಗಾಗಿ ಸಕಲ ಸಿದ್ದತೆಯಲ್ಲಿ ತೊಡಗಿದ್ದು, ಜನರಿಗೆ ಗಿಫ್ಟ್ ನೀಡುವ ಮೂಲಕ ಮತ ಪಡೆಯೋದಕ್ಕೆ ಮುಂದಾಗಿದ್ದಾರೆ. ಅದರಲ್ಲೂ ಸಿವಿ ರಾಮನ್ ನಗರದಲ್ಲಿ ಸ್ಥಳೀಯ ಶಾಸಕ ರಘು ತಟ್ಟೆ, ಲೋಟ, ಸ್ಪೂನ್ ಕೊಡುಗೆಯಾಗಿ ನೀಡಿದ್ದಾರೆಂದು ಮಾಧ್ಯಮಗಳ ಮುಂದೆ ಫೋಟೋ ಸಮೇತ ಎಎಪಿ ಗಂಭೀರ ಆರೋಪ ಮಾಡಲಾಗಿದೆ. ಮತದಾರರನನ್ನು ತಮ್ಮ ಪಕ್ಷಕ್ಕೆ ಸೆಳೆಯೋದಕ್ಕೆ ಗಿಫ್ಟ್ ನೀಡುವ ಮೂಲಕ ಮನವೋಲಿಕೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
Laxmi News 24×7