ಬಳ್ಳಾರಿ: ಹೊಸ ಪಕ್ಷವನ್ನು ಸ್ಥಾಪಿಸಿರುವ ಜನಾರ್ದನ ರೆಡ್ಡಿ ವಿರುದ್ಧವೇ ಅವರ ಸಹೋದರ ಸೋಮಶೇಖರ ರೆಡ್ಡಿ ಅವರು ಅಸಮಾಧಾನ ಹೊರ ಹಾಕಿದ್ದಾರೆ(Karnataka Election).
ಪಕ್ಷ ಕಟ್ಟುವುದು ಬೇಡವೆಂದರೂ ಕೇಳಲಿಲ್ಲ ನಮ್ಮ ಸಹೋದರ. ಪಕ್ಷ ಕಟ್ಟಿರುವುದಕ್ಕೆ ಏನು ಮಾಡುವುದಕ್ಕೆ ಆಗುತ್ತದೆ.
ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಯಿಂದ ನಾನು ಸ್ಪರ್ಧಿಸುವುದು ನಿಶ್ಚಿತ. ಜನಾರ್ದನ ರೆಡ್ಡಿ ಬಂದು ನಿಂತರೂ ನಾನು ಸ್ಪರ್ಧಿಸುತ್ತೇನೆ, ಇದಕ್ಕಿಂತ ನಾನು ಇನ್ನೇನು ಹೇಳಬೇಕು ಎಂದು ಅವರು ಕೇಳಿದ್ದಾರೆ.
ಯಾವತ್ತಿಗೂ ಬಿಜೆಪಿ ಪಾರ್ಟಿ ಬಿಡುವುದಿಲ್ಲ, ಇಲ್ಲಿಯೇ ಇರುತ್ತೇನೆ, ಶ್ರೀರಾಮುಲು ಮತ್ತು ನಾನು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ, ಆದರೆ ಜನಾರ್ದನ ರೆಡ್ಡಿ ಇನ್ನು ಏನು ಹೇಳ್ತಿಲ್ಲ. ರಾಜಕೀಯದಲ್ಲಿ ಇರುವಾಗ ಮನುಷ್ಯ ತಾಳ್ಮೆಯಿಂದ ಇರಬೇಕು, ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿ ೧೦೦% ತಪ್ಪು ಮಾಡಿದ್ದಾರೆ ಎಂದು ಸೋಮಶೇಖರ್ ರೆಡ್ಡಿ ಅವರು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪರ್ಧಿಸುವ ರೈಟ್ಸ್ ಎಲ್ಲರಿಗೂ ಇದೆ, ನಾನು ಯಾವುದೇ ಕಾರಣಕ್ಕೂ ನ್ಯೂಟ್ರಲ್ ಆಗಲ್ಲ, ಇದ್ದರೆ ನೇರವಾಗಿ ಇರುತ್ತೇವೆ, ಇಲ್ಲವೆ ಸುಮ್ಮನೆ ಇರುತ್ತೇನೆ. ೨೦೧೩ರಲ್ಲಿ ತಮ್ಮನ ಸಲುವಾಗಿ ತ್ಯಾಗಮಾಡಿ ಸ್ಪರ್ಧೆಮಾಡಿಲ್ಲ, ತಮ್ಮ ಜೈಲಿನಲ್ಲಿದ್ದರಿಂದ ಕೋರ್ಟ್ ತಿರುಗಾಡಬೇಕೆಂದು ಸ್ಪರ್ಧಿಸಿರಲಿಲ್ಲ.
Laxmi News 24×7