Breaking News

ಯತ್ನಾಳ್ ರನ್ನು ಸಹಿಸಿಕೊಂಡಾಯ್ತು, ಇನ್ನು ನಿರ್ಧಾರ ಮಾಡಬೇಕಿದೆ: ಕಿಡಿಕಾರಿದ ನಿರಾಣಿ

Spread the love

ದಾವಣಗೆರೆ: ‘ಪಿಂಪ್ ಸಚಿವ’ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಚಿವ ಮುರುಗೇಶ ನಿರಾಣಿ ನೊಂದುಕೊಂಡ ಘಟನೆ ನಡೆಯಿತು. ಯತ್ನಾಳ್ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ನಿರಾಣಿ ಭಾವುಕರಾದರು.

ಬಿಜೆಪಿ ಸಂಸ್ಕೃತಿ ಹೊಂದಿರುವ ಪಕ್ಷ, ನಮ್ಮ ಸಮುದಾಯವೂ ಸಂಸ್ಕೃತಿ ಹೊಂದಿದೆ.

ಶಾಸಕ ಯತ್ನಾಳ ಅಸಂವಿಧಾನಿಕ ಮಾತುಗಳನ್ನು ಆಡುತ್ತಾರೆ

ಸಿದ್ದೇಶ್ವರ ಸ್ವಾಮೀಜಿ ಅವರ ಸನ್ನಿಧಿಯಲ್ಲಿ ಬೆಳೆದವರು ನಾವು. ಅವರನ್ನು 0.5 ರಷ್ಟು ನಾವು ಅನುಕರಣೆ ಮಾಡಿದರೂ ಸಾಕು ಎಂದರು.

\

ದೀಪ ಹಾರುವಾಗ ಗಾಳಿ ಜೋರಾಗಿ ಇರತ್ತಂತೆ, ಯತ್ನಾಳ ಪರಿಸ್ಥಿತಿ ಕೂಡ ಹಾಗೆಯಾಗಿದೆ. ಯತ್ನಾಳ್ ಗೆ ಪಕ್ಷದಲ್ಲಿ ಇರುವುದು ಇಷ್ಟವಿಲ್ಲದೇ ಇದ್ದರೆ ಬಿಟ್ಟು ಹೋಗಲಿ. ಯತ್ನಾಳ್ ಎಲ್ಲರ ಬಗ್ಗೆ ಹಗರುವಾಗಿ ಮಾತನಾಡುತ್ತಲೇ ಇದ್ದಾರೆ. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಬೊಮ್ಮಾಯಿ, ಶೆಟ್ಟರ್, ಸೋಮಣ್ಣ ಹೀಗೆ ಎಲ್ಲರ ಮೇಲೂ ಮಾತಾಡಿದ್ದಾರೆ. ನಂತರ ನ್ಯಾಯಾಲಯಕ್ಕೆ ಹೋಗಿ ಕೈಕಾಲು ಹಿಡಿದು ಬಂದಿದ್ದಾರೆ. ಜಯ ಮೃತ್ಯುಂಜಯ ಸ್ವಾಮೀಜಿ, ಯತ್ನಾಳ್ ಅವರ ವಿರುದ್ಧ ಹೋರಾಟ ಮಾಡೋದು ಬಿಟ್ಟು ನಮ್ಮ ವಿರುದ್ಧ ಮಾಡುತ್ತಿದ್ದಾರೆ ಎಂದು ನಿರಾಣಿ ಬೇಸರ ವ್ಯಕ್ತಪಡಿಸಿದ್ದಾರೆ.

ನಾನಾಗಿಯೇ ಯತ್ನಾಳ್ ವಿರುದ್ದ ವಾಗ್ದಾಳಿ ಮಾಡಿಲ್ಲ. ಅವರು ನೀಡಿದ ಹೇಳಿಕೆ ಉತ್ತರ ಕೊಟ್ಟಿದ್ದೇನೆ. ಅವರನ್ನು ಸಹಿಸಿಕೊಂಡಿದ್ದಾಗಿದೆ. ಈಗ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದರು.

ಜೆಡಿಎಸ್ ಗೆ ಹೋಗಿ ಮುಸ್ಲಿಂ ಟೋಪಿ ಹಾಕಿದ್ದು ಎಲ್ಲರಿಗೂ ಗೊತ್ತಿಗೆ. ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ, ನಾವೂ ಘಟಪ್ರಭ ಮಲಪ್ರಭಾ ನೀರು ಕುಡಿದೇ ಬೆಳದಿದ್ದೇವೆ. ನಮಗೂ ಮಾತನಾಡುವುದಕ್ಕೆ ಬರುತ್ತದೆ, ಸುಮ್ಮನೆ ಇದ್ದೇವೆಂದರೆ ದೌರ್ಬಲ್ಯ ಅಲ್ಲ. ಯತ್ನಾಳ್ ಏನೂ ಸತ್ಯ ಹರಿಶ್ಚಂದ್ರ ಅಲ್ಲ. ದೊಡ್ಡ ಸಮಾಜದಲ್ಲಿ ಹುಟ್ಟಿದ್ದೀರಿ ಗೌರವದಿಂದ ಮಾತಾಡಿ ಎಂದು ಮುರುಗೇಶ್ ನಿರಾಣಿ ಗುಡುಗಿದರು.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ