ದಾವಣಗೆರೆ: ಮೀಸಲಾತಿ ವಿಚಾರವಾಗಿ ಈಗಾಗಲೇ ಕೆಲಸ ಮಾಡಿದ್ದೇವೆ. ಕ್ಯಾಬಿನೆಟ್ ನಲ್ಲಿ ಪಾಸ್ ಮಾಡಿದ್ದೇವೆ. ತಮಿಳುನಾಡು ಮಾದರಿಯಲ್ಲಿ ನಾವು ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಉಚಿತ ವಿದ್ಯುತ್ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಜನರನ್ನು ಮರಳು ಮಾಡುತ್ತಿದೆ.
ಕಾಂಗ್ರೆಸ್ ನವರು ಕ್ರೇಜಿವಾಲ್ ದಾರಿಯಲ್ಲಿ ಹೋಗುತ್ತಿದ್ದಾರೆ. ಕಾಂಗ್ರೆಸ್ ನವರು ಹತಾಶರಾಗಿ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದರು.
ನಾವು ಈಗಾಗಲೇ ಏನೆಲ್ಲ ಕೊಡಬೇಕೋ ಅದೆಲ್ಲಾ ಕೊಟ್ಟಿದ್ದೇವೆ. ಈ ಬಾರಿ ಜನಪರ ಬಜೆಟ್ ಮಂಡಿಸುತ್ತೇವೆ. ವರ್ಷದ ಹಣಕಾಸು ವ್ಯವಸ್ಥೆ, ಅಂತ್ಯದ ಹಣಕಾಸು ವ್ಯವಸ್ಥೆ ನೋಡಿಕೊಂಡು ಯೋಜನೆ ರೂಪಿಸುತ್ತೇವೆ. ಡಿಸೆಂಬರ್ ವರೆಗೂ ಗುರಿ ಮೀರಿ ಸಾಧನೆಯಾಗಿದೆ. ಮುಂದಿನ ಬಜೆಟ್ ಗಾತ್ರ ತೀರ್ಮಾನಕ್ಕೆ ಸಮಯಾವಕಾಶ ಇದೆ. ರಾಜ್ಯದಲ್ಲಿ 25 ಟೆಕ್ಸ್ ಟೈಲ್ ಪಾರ್ಕ್ ಮಾಡುತ್ತೇವೆ. ಜನಪರ ಬಜೆಟ್ ಮಾಡುತ್ತೇವೆ ಎಂದ ಸಿಎಂ ಬೊಮ್ಮಾಯಿ ಹೇಳಿದರು.
Laxmi News 24×7