ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2023ರಂದು 2023-2024ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಈ ವರ್ಷದ ಬಜೆಟ್ 2024ರ ಲೋಕಸಭೆ ಚುನಾವಣೆಗೂ ಮುನ್ನ ಬರುತ್ತಿದೆ. ಅದರಿಂದಾಗಿ ಬಜೆಟ್ ನಿರೀಕ್ಷೆ ಹೆಚ್ಚೇ ಇದೆ.
ಸರ್ಕಾರವು ಚುನಾವಣಾ ನೆಲೆಯಲ್ಲಾದರೂ ಗ್ರಾಮೀಣ ಪ್ರದೇಶದ ಬೆಳವಣಿಗೆ ಹೆಚ್ಚಿನ ಬಜೆಟ್ ಹಂಚಿಕೆ ಮಾಡಬಹುದು ಎಂಬ ನಿರೀಕ್ಷೆಗಳಿದೆ.
ಮಧ್ಯಮ ವರ್ಗದ ಮಾಸಿಕ ವೇತನ ಪಡೆಯುವ ವರ್ಗವು ಸರ್ಕಾರವು ಆದಾಯ ತೆರಿಗೆ ಸ್ಲ್ಯಾಬ್ ಅನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಯನ್ನು ಹೊಂದಿದ್ದರೆ, ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರು ಕೂಡಾ ತೆರಿಗೆ ಸಂಬಂಧಿತ ಹಲವಾರು ಬೇಡಿಕೆಗಳನ್ನು ಹೊಂದಿದ್ದಾರೆ. ಈ ಮಧ್ಯೆ ಗ್ರಾಮೀಣ ಪ್ರದೇಶದ ಜನರು ಮಾತ್ರ ತಮ್ಮ ಪ್ರದೇಶ ಬೆಳವಣಿಗೆಯ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಿದ್ದಾರೆ.
Laxmi News 24×7