Breaking News

K.M.F ಮೇಲೆ ಕೇಂದ್ರದ ಕಣ್ಣು: ಕಾಂಗ್ರೆಸ್‌ ವಾಗ್ಧಾಳಿ

Spread the love

ಬೆಂಗಳೂರು: ಕನ್ನಡಿಗರ ಕೆನರಾ, ಕಾರ್ಪೊರೇಷನ್‌, ವಿಜಯಾ ಬ್ಯಾಂಕುಗಳ ಅಸ್ತಿತ್ವ ಕಸಿದ ಕೇಂದ್ರ ಸರ್ಕಾರ ಈಗ ಕೆಎಂಎಫ್ ಮೇಲೆ ಕಣ್ಣು ಹಾಕಿದೆ ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಸರಣಿ ಟ್ವಿಟ್‌ ಮಾಡಿರುವ ಕಾಂಗ್ರೆಸ್‌, ಬಿಜೆಪಿ ಎಂದರೆ ಭಸ್ಮಾಸುರ ಜನತಾ ಪಾರ್ಟಿ.ಭಸ್ಮಾಸುರ ತಲೆಯ ಮೇಲೆ ಕೈ ಇಟ್ಟರೆ ಭಸ್ಮವಾಗುತ್ತಿದ್ದರು.

ಆದರೆ ಬಿಜೆಪಿಯವರು ಕಣ್ಣು ಹಾಕಿದರೆ ಸಾಕು ಭಸ್ಮವಾಗುತ್ತದೆ. ಕೆಎಂಎಫ್ ಉಳಿಸಲು ಕಾಂಗ್ರೆಸ್‌ ಬದ್ಧವಾಗಿದೆ ಎಂದು ಹೇಳಿದೆ.

ರೈತರ ಮೇಲೆ ಬಿಜೆಪಿ ಸರ್ಕಾರಕ್ಕೆ ಜನ್ಮ ಜನ್ಮಾಂತರದ ದ್ವೇಷ ಇದ್ದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕರ್ನಾಟಕವು ಬಿಜೆಪಿಯ ಎಟಿಎಂ ಎಂಬುದನ್ನು ಬಿಜೆಪಿಯವರೇ ಹೇಳಿದ್ದಾರೆ. ನಿರಾಣಿ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ರೂ. ನೀಡಿ ಮಂತ್ರಿಯಾದರು. ಸಚಿವ ಸ್ಥಾನಗಳು ಮಾರಾಟಗೊಂಡಿವೆ ಎಂದು ಯತ್ನಾಳ್‌ ಹೇಳುತ್ತಾರೆ.

ರಾಜಕೀಯ ಎಂದರೆ ನನಗೆ ಬಿಸಿನೆಸ್‌ ಎಂದಿರುವ ಕೇಂದ್ರ ಸಚಿವ ಅಮಿತ್‌ ಶಾ ಅವರು ರಾಜ್ಯಕ್ಕೆ ಬಂದಿದ್ದು, ಆಪರೇಷನ್‌ ಕಮಲದ ಮೂಲಕ ಮಾಡಿದ್ದ ಹೂಡಿಕೆಯ ಲಾಭಾಂಶ ಪಡೆದು ಹೋಗುವುದಕ್ಕಾ ಎಂದು ವಾಗ್ಧಾಳಿ ನಡೆಸಿದೆ.


Spread the love

About Laxminews 24x7

Check Also

ಬಿಜೆಪಿ-ಜೆಡಿಎಸನಲ್ಲಿ ಅಸಮಾಧಾನಗೊಂಡ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಏನಂದ್ರು??

Spread the loveಜ್ಯಾತ್ಯಾತೀತವಾಗಿ ಕಾಂಗ್ರೆಸ್ ಸಿದ್ಧಾಂತಗಳನ್ನು ಒಪ್ಪಿ ಬರುವ ಕಾರ್ಯಕರ್ತರಿಗೆ ಪಕ್ಷದಲ್ಲಿ ಸ್ವಾಗತವಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ