ಸುವರ್ಣ ವಿಧಾನಸೌಧ: ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಜೂರು ಗ್ರಾಪಂ ವ್ಯಾಪ್ತಿಯ ಪಾದೂರು ಗ್ರಾಮದಲ್ಲಿನ ಐಎಸ್‌ಆರ್‌ಎಲ್ ಸಂಸ್ಥೆಯಿಂದ ಗ್ರಾಪಂಗೆ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಸಂಸ್ಥೆಯವರೊಂದಿಗೆ ಚರ್ಚಿಸಿ ತೆರಿಗೆ ಮೊತ್ತ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ವಿಧಾನಪರಿಷತ್‌ನಲ್ಲಿ ಬಿಜೆಪಿಯ ಕೆ. ಪ್ರತಾಪಸಿಂಹ ನಾಯಕ್ ವಿಷಯ ಪ್ರಸ್ತಾಪಿಸಿ, ಐಎಸ್‌ಪಿಆರ್‌ಎಲ್ ಸಂಸ್ಥೆ ಪಾದೂರು ಗ್ರಾಮದಲ್ಲಿ ಮೊದಲ ಹಂತದಲ್ಲಿ 180 ಎಕರೆಯಲ್ಲಿ ಕೈಗಾರಿಕೆ ಈಗಾಗಲೆ ಸ್ಥಾಪಿಸಲಾಗಿದೆ. ಎರಡನೇ ಹಂತದಲ್ಲಿ 210 ಎಕರೆ ಜಾಗದಲ್ಲಿ ಕೈಗಾರಿಕಾ ಘಟಕ ಸ್ಥಾಪಿಸಲಾಗುತ್ತಿದೆ.
ಇದರಿಂದಾಗಿ ಗ್ರಾಮಗಳಲ್ಲಿ ಮನೆಗಳ ನಿರ್ಮಾಣ ಕಡಿಮೆಯಾಗಿದೆ ಹಾಗೂ ಹಳೇ ನಿವಾಸಿಗಳು ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಗ್ರಾಪಂಗೆ ಆದಾಯ ಕೊರತೆಯುಂಟಾಗುತ್ತಿದೆ. ಅದನ್ನು ನಿವಾರಿಸುವ ಐಎಸ್‌ಪಿಆರ್‌ಎಲ್ ಸಂಸ್ಥೆಯಿಂದ ತೆರಿಗೆ ಪಾವತಿಗೆ ಸೂಚಿಸಲಾಗಿತ್ತು. ಆದರೀಗ ಸಂಸ್ಥೆಯು ತೆರಿಗೆ ಪಾವತಿಸದೆ, ಗ್ರಾಪಂ ನೀಡಿದ ನೋಟಿಸ್‌ಗೆ ವಿರುದ್ಧವಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ ಎಂದರು.