Breaking News

ವಿಕಲಚೇತನರ ಗೌರವ ಧನ, ಕಾರ್ಯಕರ್ತರ ಹುದ್ದೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

Spread the love

ರಾಜ್ಯದ‌ ಎಂಆರ್ ಡಬ್ಯೂ, ವಿಆರ್ ಡಬ್ಯೂ, ಯುಆರ್ ಡಬ್ಯೂ ವಿಕಲಚೇತನರ ಗೌರವ ಧನ, ಕಾರ್ಯಕರ್ತರ ಹುದ್ದೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಮಂಗಳವಾರ ನವ ಕರ್ನಾಟಕ ವಿಕಲಚೇತನ ಕಾರ್ಯಕರ್ತರ ಸಂಘ ಸುವರ್ಣ ವಿಧಾನಸೌಧದ ಬಸ್ತವಾಡದ ಬಳಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಒತ್ತಾಯಿಸಿದರು.

ಮಹಾರಾಷ್ಟ್ರದ ಮಾದರಿಯಲ್ಲಿ ವಿಕಲಚೇತನರಿಗಾಗಿ ವಿಶೇಷ ಸಚಿವಾಲಯ‌ ಘೋಷಣೆ ಮಾಡಬೇಕು. ಕಳೆದ ನಾಲ್ಕೈದು ವರ್ಷಗಳಿಂದ ರಾಜ್ಯದ ಹೊಸ ತಾಪಂ. ಗಳಿಗೆ‌ ಎಂಆರ್ ಡಬ್ಯೂಗಳನ್ನು ಹುದ್ದೆ ಗಳನ್ನು ನೇಮಕ ಮಾಡಿಕೊಂಡಿರುವುದಿಲ್ಲ. ಹೊಸ ನೇಮಕಾತಿ ಮಾಡಿಕೊಳ್ಳಲು ಸರಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆಗಳಲ್ಲಿ ವಾಡ್೯ಗೆ ಒಬ್ಬರಂತೆ ಹೊಸ ಯುಆರ್ ಡಬ್ಯೂಗಳನ್ನು ನೇಮಕಾತಿಗಾಗಿ ಆದೇಶ ಹೊರಡಿಸಬೇಕು. ಎಂಆರ್ ಡಬ್ಯೂ, ವಿಆರ್ ಡಬ್ಯೂ, ಯುಆರ್ ಡಬ್ಯೂ ಗೌರವ ಧನ ಕಾರ್ಯಕರ್ತರ ಕರ್ತವ್ಯದಲ್ಲಿ ಮರಣ ಹೊಂದಿದಲ್ಲಿ 5 ಲಕ್ಷದವರೆಗೆ ಸಹಾಯ ಧನ‌ ಹೆಚ್ಚಿಸಬೇಕು. ನಿಯಮ ಸಡಿಲಿಕೆ ಮಾಡಿ ಕನಿಷ್ಠ 6 ತಿಂಗಳ ಕಾಲ ಸೇವೆ ಸಲ್ಲಿಸಿದವರನ್ನು ಪರಿಗಣಿಸಬೇಕೆಂದು ಆಗ್ರಹಿಸಿದ್ದಾರೆ.

ಮಹಿಳಾ ಗೌರವ ಧನ ಕಾರ್ಯಕರ್ತರಿಗೆ ವೇತನ ಸಹಿತ ಹೆರಿಗೆ ರಜೆ ನೀಡುವಂತೆ ಕ್ರಮ ಕೈಗೊಳ್ಳಬೇಕು. ಎನ್ ಪಿಆರ್ ಡಿ ಯೋಜನೆಯ ಮಾರ್ಗಸೂಚಿ ತಿದ್ದುಪಡಿ ಮಾಡಿ ವಯೋಮಿತಿ‌ ಮೀರಿ ಹೋಗುವವರಿಗೆ ಕಾರ್ಯಕರ್ತರನ್ನು ಮುಂದುವರೆಸಬೇಕು. ನಿರ್ದೇಶಕರು, ಕೇಂದ್ರ ಕಚೇರಿ ಹೆಸರು ದುರ್ಬಳಕೆ ಮಾಡಿಕೊಂಡು ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗಳು ಹಾಗೂ ಗೌರವ ಧನದ ಕಾರ್ಯಕರ್ತರಿಗೆ ಬೆದರಿಸುವ ರಾಜ್ಯ ಸಂಯೋಜಕ ನರಸಿಂಹಮೂರ್ತಿಯವರಿಗೆ ಕೆಲಸದಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿದರು.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ