ಗಡಿ ವಿಷಯವಾಗಿ ಕೇಂದ್ರ ಗೃಹ ಮಂತ್ರಿಗಳು ಕರೆದ ಸಭೆಗೆ ನಾನು ಹಾಜರಾಗಿದ್ದೆನೆ, ಸಭೆಯಲ್ಲಿ ಗೃಹಸಚಿವರು ಎರಡು ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥಿತ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ ಹೋರತು ಬೇರೆ ಯಾವುದೇ ವಿಚಾರ ಚರ್ಚೆಯಾಗಿಲ್ಲಾ ಎಂದು ಸಭೆಗೆ ತಿಳಿಸಿದರು.
ಮದ್ಯ ಪ್ರವೇಶಿಸಿದ ಎಚ್ ಕೆ ಪಾಟೀಲ ಅಮಿಶ್ ಷಾ ರವರು ನೀಡಿದ ಸಲಹೆ ಮುಖ್ಯಮಂತ್ರಿ ತಗೆದುಕೊಂಡು ಬಂದಿದ್ದಾರೆ, ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿರುವಾಗ ಮೂವರು ಸಚಿವರ ಸಮಿತಿ ಮಾಡುವದರ ಅರ್ಥ ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತ ಹದಗೇಟ್ಟಿದಿಯಾ ಇದಕ್ಕೆ ಕಾನೂನು ಸಚಿವರು ಅಸಹಾಯಕರಾಗಿದ್ದಾರೆ ಎಂದು ಕಂಡು ಬರುತ್ತಿದೆ ಎಂದಾಗ ಮುಖ್ಯಮಂತ್ರಿಗಳು ಮದ್ಯಪ್ರವೇಶಿಸಿ ನೀವು ಮಾದ್ಯಮಗಳ ವರದಿ ಪ್ರಕಾರ ನಮ್ಮ ಮೇಲೆ ಆರೋಪ ಮಾಡುವದು ತಪ್ಪು ಎಂದು ಮನವರಿಕೆ ಮಾಡಿದರು.
ಎಚ್ ಕೆ ಪಾಟೀಲ ಮಾತು ಮುಂದುವರೆಸಿ ಮುಖ್ಯಮಂತ್ರಿಗಳು ಟ್ವೀಟ್ ಮೂಲಕ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗಿದೆ ಎಂದಾಗ ಮುಖ್ಯಮಂತ್ರಿಗಳು ಆ ಟ್ವೀಟ್ ನಮ್ಮ ಅಧಿಕೃತವಾಗಿಲ್ಲಾ ಇದರ ಬಗ್ಗೆ ತನಿಖೆ ಮಾಡುತ್ತಿದ್ದೆನೆ ಎಂದರು .
ಮುಖ್ಯಮಂತ್ರಿಗಳು ಮಾತನಾಡಿ ಒಕ್ಕೂಟ ವಿಷಯವಾಗಿ ಜಲ ವಿವಾದ, ನೆಲ ವಿವಾದ ಬಂದಾಗ ಕಾನೂನು ಸುವ್ಯವಸ್ಥೆ ಕುರಿತು ಕೇಂದ್ರ ಮಧ್ಯಸ್ಥಿಕೆ ವಹಿಸುತ್ತದೆ ಅದೆ ರೀತಿ ಅಮಿತ ಷಾ ಮಾರ್ಗದರ್ಶನ ನೀಡಿದ್ದಾರೆ ವಿನಃಹ ತಿರ್ಪು ನಿಡಿಲ್ಲಾ ಎಂದರು.
ಕೊನೆಯಲ್ಲಿ ಸಿದ್ದರಾಮಯ್ಯ ಮತ್ತೆ ಮಾತನಾಡುತ್ತಾ ಯಾವದೇ ಸಮಯದಲ್ಲಿ ಕರ್ನಾಟಕದ ಒಂದಿಂಚು ನೆಲ ಬಿಟ್ಟು ಕೋಡುವ ಮಾತೆ ಇಲ್ಲಾ, ಇದಕ್ಕೆ ಕೇಂದ್ರ ಸರ್ಕಾರ ತಿರ್ಪು ಮನ್ನಣೆ ಇಲ್ಲಾ, ಸುಪ್ರೀಂ ಕೋರ್ಟ ನಿರ್ಣಯ ಮಾಡಬೇಕಾಗಿದೆ ಕಾರಣ ಗಡಿ,ನೆಲ,ಭಾಷೆ ವಿಚಾರದಲ್ಲಿ ನಾವೇಲ್ಲೆರೂ ಒಂದೇ ಸರ್ವಪಕ್ಷ ಒಕ್ಕಟ್ಟಾಗಿ ಇರಬೇಕಾಗಿದೆ.ಕಾರಣ ಮಹಾರಾಷ್ಟ್ರ ದವರಿಗೆ ಸೋಪ್ಪು ಹಾಕಬಾರದು. ರಾಜ್ಯದ ಜನತೆಗೆ ನಾವು ಒಂದಿಂಚೂ ಜಾಗಾ ಮಹಾರಾಷ್ಟ್ರಕ್ಕೆ ಕೋಡುವದಿಲ್ಲಾ ಎಂದು ಹೇಳಬೇಕಾಗಿದೆ.
Laxmi News 24×7