ಬೆಳಗಾವಿ: ವಿಧಾನ ಪರಿಷತ್ ಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸೋಮವಾರ ಪರಿಷತ್ ಬಿಜೆಪಿ ಸದಸ್ಯರು ಸಭೆ ನಡೆಸಿದರು.
ಪರಿಷತ್ ಸಭಾಂಗಣದ ಪಕ್ಕದ ಕೊಠಡಿಯಲ್ಲಿ ಸಭೆ ನಡೆಸಿದ ಸದಸ್ಯರು, ಬುಧವಾರ ನಡೆಯಲಿರುವ ಸಭಾಪತಿ ಚುನಾವಣೆ ಹಾಗೂ ಮಂಗಳವಾರ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಕುರಿತಂತೆ ಚರ್ಚೆ ನಡೆಸಿದರು.
ಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಬಸವರಾಜ ಹೊರಟ್ಟಿ ಮಂಗಳವಾರ ಬೆಳಗ್ಗೆ 11 ಗಂಟೆಯೊಳಗೆ ನಾಮಪತ್ರ ಸಲ್ಲಿಕೆ ಮಾಡುವ ಕುರಿತು ನಿರ್ಧರಿಸಲಾಯಿತು.
ನಾನು ಪಕ್ಷದ ವ್ಯಾಪ್ತಿಯಲ್ಲಿಲ್ಲ
ಸಭಾಪತಿ ಸ್ಥಾನಕ್ಕೆ ಸಭೆ ನಡೆಯುವುದಕ್ಕೂ ಮುನ್ನ ಬಸವರಾಜ ಹೊರಟ್ಟಿ ಅವರು, ಬಿಜೆಪಿಯ ಎಚ್.ವಿಶ್ವನಾಥ್ ಅವರನ್ನು ಭೇಟಿಯಾಗಿ ಸಭೆಗೆ ಬರುವಂತೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ನಾನು ಈಗ ಪಕ್ಷದ ವ್ಯಾಪ್ತಿಯಲ್ಲಿಲ್ಲ.
ನಾನು ಸ್ವತಂತ್ರನಾಗಿದ್ದೇನೆ. ಬಿಜೆಪಿ ಪರವಾಗಿ ನನ್ನ ಬಳಿ ಬರಬೇಡಿ. ಆದರೆ ಸಭಾಪತಿ ಚುನಾವಣೆಯಲ್ಲಿ ನಿಮಗೇ ಮತ ಚಲಾಯಿಸುತ್ತೇನೆ ಎಂದು ಹೇಳಿದರು.
Laxmi News 24×7