ಉತ್ತರ ವಲಯ ವ್ಯಾಪ್ತಿಯಲ್ಲಿ ಫೊನ್ ಇನ್ ಕಾರ್ಯಕ್ರಮನಡೆಸುವಂತೆ ಎಸ್ಪಿಗಳಿಗೆ ಸೂಚನೆ ನೀಡಲಾಗುವುದು ಎಂದು ಐಜಿಪಿ ಸತೀಶಕುಮಾರ ಹೇಳಿದರು.
ಜಿಲ್ಲಾ ಪೊಲೀಸ್ ಮೈದಾನದಲ್ಲಿ ಪ್ರಾಪರ್ಟಿ ಪರೇಡ್ ಕಾರ್ಯಕ್ರಮ ಮುಗಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಬೆಳಗಾವಿ ಎಸ್ಪಿ ರವರು ನಡೆಸುವ ಹಾಗೆ ತಿಂಗಳಲ್ಲಿ ಒಂದು ದಿನ ನಾನು ಅಷ್ಟೇ ಅಲ್ಲ ಎಲ್ಲ ಎಸ್ಪಿಗಳಿಗೂ ಪೊನ್ ಇನ್ ಕಾರ್ಯಕ್ರಮ ನಡೆಸುವಂತೆ ಸೂಚನೆ ನೀಡುವುದಾಗಿ ಹೇಳಿದರು.
ಕಳೆದ ಒಂದು ವರ್ಷದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಅಪರಾಧ ಪತ್ತೆ ಪ್ರಕರಣಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶೇ. ೭೦ ರಷ್ಟು ಸಾಧನೆ ಇದಾಗಿದೆ ಎಂದು ಐಜಿಪಿ ಹೇಳಿದರು. ಬೀಟ್ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಈ ಹಿಂದೆ ಸಂಶಯಿತರು ಸಿಕ್ಕರೆ ಅವರನ್ನು ಠಾಣೆಗೆ ಕರೆದುಕೊಂಡು ಬಂದು ಬೆರಳಚ್ಚು ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಈಗ ಹೈಟೆಕ್ ಕಾಲ. ಬೀಟ್ ಪೊಲೀಸರಿಗೆ ಮೊಬೈಲ್ ನಲ್ಲಿ ಸಂಶಯಿತರ ಬೆರಳಚ್ಚು ಒತ್ತಿದರೆ ಎಲ್ಲವೂ ಗೊತ್ತಾಗುತ್ತದೆ. ಹೀಗಾಗಿ ಆರೋಪಿತರನ್ನು ಬೇಗ ಪತ್ತೆ ಮಾಡಬಹುದಾಗಿದೆ ಎಂದು ಅವರು ಹೇಳಿದರು
Laxmi News 24×7