ಬೆಳಗಾವಿ: ಡಿ.19 ರ ಒಳಗಾಗಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮಿಸಲಾತಿ ನೀಡಬೇಕು. ಸರ್ಕಾರ ತಾನೇ ಕೊಟ್ಟ ಗಡುವಿನ ಪ್ರಕಾರ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಡಿ.22 ನೇ ತಾರಿಕು ಸುವರ್ಣಸೌದದ ಎದುರು ಪಂಚಮಸಾಲಿ ವಿರಾಠ ಪಂಚಮ ಶಕ್ತಿ ಪ್ರದರ್ಶನ ಮಾಡಿ 25 ಲಕ್ಷ ಜನ ಸೇರಿಸುತ್ತೇವೆ ಎಂದು ಬಸವ ಶ್ರೀ ಜಯಮೃತ್ಯುಂಜಯ ಸ್ವಾಮಿ ಹೇಳಿದರು.
ನಗರದ ಗಾಂಧಿ ಭವನದಲ್ಲಿ 2 ಮೀಸಲಾತಿಗಾಗಿ ನಡೆಸಿದ ಸಭೆ ಬಳಿಕ ಮಾದ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ವರ್ಷದಿಂದ ನಿರಂತ ಹೋರಾಟ ಮಾಡುತ್ತಿದ್ದೇವೆ. ಇಂದು ಸರ್ಕಾರಕ್ಕೆ ನೇನಪಿಸುವ ಸಲುವಾಗಿ ಸಭೆ ಮಾಡಿದ್ದೇವೆ. ಹಾಗಾಗಿ ಸರ್ಕಾರ ವಿಳಂಬ ಧೋರಣೆ ಮಾಡದೆ ಮೀಸಲಾತಿ ನೀಡಬೇಕು. ಸರ್ಕಾರ ನೀಡದ ಸಮಯದೊಳಗೆ ಮೀಸಲಾತಿ ನೀಡಿದರೆ, ಅವರಿಗೆ ಸನ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಸಮಾವೇಶದಲ್ಲಿ ದಾಸೊಹಕ್ಕೆ ದಾವಣಗೆರಿಂದ 1 ಸಾವಿರ ಕ್ವಿಂಟಾಲ್ ಹಕ್ಕಿ ಬರಲಿದೆ, ಇದು ನಮ್ಮ ಅಂತಿಮ ಹೋರಾಟ, ಮಾಡು ಇಲ್ಲವೆ ಮಡಿ ಹೋರಾಟ, ಡಿ.19 ರ ಸಾಯಂಕಾಲದ ವರೆಗೆ ಕಾಯುತ್ತೇವೆ. ಇಲ್ಲದಿದ್ದರೆ ಸವದತ್ತಿಯಿಂದ ಸುವರ್ಣಸೌದದ ವರೆಗೆ ಪಾದಯಾತ್ರೆ ಮೂಲಕ ಹೋರಾಟ ಮಾಡುತ್ತೇವೆ ಎಂದು ಬಸವ ಶ್ರೀ ಜಯಮೃತ್ಯುಂಜಯ ಸ್ವಾಮಿ ಹೇಳಿದರು.