ಬೆಳಗಾವಿ: ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ನೀಡಲಾಗುವ ಕಾರ್ಮಿಕರ ಕಿಟ್ಟಗಳನ್ನು ಶಾಸಕ ಅನಿಲ ಬೆನಕ ಅವರು ವಿತರಣೆ ಮಾಡಿದರು,
ಇಂದು ಮಾಹಾಂತೇಶ ನಗರದ ಮಹಾಂತ ಭವನ ಬಳಿ ವಿವಿಧ ಕಟ್ಟಡ ಕಾರ್ಮಿಕರಾದ ಪೆಂಟರ್, ಪ್ಲಂಬರ್, ಗೌಂಡಿ, ಹೀಗೆ ವಿವಿಧ ರೀತಿಯ ಕಾರ್ಮಿಕರಿಗೆ ಕಿಟ್ಟ್ ಗಳನ್ನು ಹಂಚಿಕೆ ಮಾಡಿದರು, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, ಲೇಬರ್ ಕಾರ್ಡ್ ಹೊಂದಿರುವರಿಗೆ ಕಿಟ್ಟ್ ಗಳ ಹಂಚಿಕೆ ಮಾಡಲಾಗಿದೆ, ಇಂದು 800 ಜನ ಕಾರ್ಮಿಕರಿಗೆ ಕಿಟ್ಟ್ ಗಳ ಹಂಚಿಕೆ ಮಾಡಲಾಗಿದೆ, ಈಗಾಗಲೇ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ಅವರಿಗೆ ಇನ್ನೂ ಕಿಟ್ಟ್ ಗಳನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಇನ್ನೂ 5 ಸಾವಿರ ಕಿಟ್‌ಗಳು ಬರುವುದಿದೆ, ಕಿಟ್ಟ್ ಬಂದ ತಕ್ಷಣ ಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಕಾರ್ಮಿಕ ಇಲಾಖೆಯ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ ಅವರು, ಜಿಲ್ಲೆಯ ಎಲ್ಲಾ ಮತ ಕ್ಷೇತ್ರದಲ್ಲಿಯೂ ಕಿಟ್ಟ ಹಂಚಿಕೆ ಮಾಡುತ್ತಿದ್ದೇವೆ, ಒಂದು ಕಿಟ್ಟ್ ಗೆ ಸುಮಾರು 8 ಸಾವಿರ ವೆಚ್ಚ ತಗಲುತ್ತದೆ. ಹಾಗಾಗಿ ಕಾರ್ಮಿಕರು ಕಿಟ್ಟ್ ಗಳ ಉಪಯೋಗ ಸರಿಯಾಗಿ ಮಾಡಬೇಕು ಎಂದು ಕರೆ ನೀಡಿದರು.