ಆ ಆಸಕ್ತಿಯಲ್ಲಿ ಈಗಾಗಲೇ ಸಲಗ ಸಿನಿಮಾ ಬಂದಿದೆ. ಹಿಟ್ ಕೂಡ ಆಗಿದೆ. ಇದೇ ವಿಜಯ್ ಈಗ ಮತ್ತೊಂದು (Cinema) ಸಿನಿಮಾ ಶುರು ಮಾಡಿದ್ದಾರೆ. ಅದುವೇ ಭೀಮ. ಈ ಚಿತ್ರದ ಪಾತ್ರಗಳು ಭರ್ಜಿಯಾಗಿಯೇ ಇವೆ. ಒಳ್ಳೆ ವಿಭಿನ್ನ ಪಾತ್ರಗಳನ್ನೆ ದುನಿಯಾ ವಿಜಯ್ ಡಿಸೈನ್ ಮಾಡಿದ್ದಾರೆ. ಈ ಸಿನಿಮಾದ ಮಧ್ಯದಲ್ಲಿಯೇ ವಿಜಯ್ ಹುಡುಕಿಕೊಂಡು (Tollywood)ಟಾಲಿವುಡ್ನಿಂದ ಒಂದು ದೊಡ್ಡ ಚಿತ್ರದ ಆಫರ್ ಬಂದಿತ್ತು. ಅದಕ್ಕಾಗಿಯೇ ದೇಹದ ತೂಕ ಹೆಚ್ಚಿಸಿಕೊಂಡಿ ಖದರ್ ಆಗಿಯೇ ವಿಲನ್ ಮಾತ್ರ ಮಾಡಿ ಬಂದಿದ್ದಾರೆ.
ಆದರೆ ತಮ್ಮ ಚಿತ್ರವನ್ನೂ ಮಾಡ್ಬೇಕು ಅಲ್ವೇ. ಅದಕ್ಕಾಗಿಯೇ ದುನಿಯಾ ವಿಜಯ್‌ಈಗ ದೇಹದ ತೂಕ ಇಳಿಸಿಕೊಂಡು ಸ್ಲಿಮ್ ಆಗಿಯೇ ಸಖತ್ ಯಂಗ್ ಆಗಿಯೇ ಕಾಣಿಸುತ್ತಿದ್ದಾರೆ.
ಭೀಮನಿಗಾಗಿ ಸಖತ್ ಲುಕ್-ನಯಾ ಲುಕ್ ಅಲ್ಲಿ ವಿಜಯ್ ಮಿಂಚಿಂಗ್
ದುನಿಯಾ ವಿಜಯ್ ದೇಹದವನ್ನ ತಮಗೆ ಹೇಗೆ ಬೇಕೋ ಹಾಗೆ ಮೋಲ್ಡ್ ಮಾಡಿಕೊಳ್ಳ್ತಾರೆ. ದೇಹದ ತೂಕ ಹೆಚ್ಚಿಸಬೇಕೋ. ಓಕೆ ಫೈನ್ ಎಂದು ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ತೂಕ ಹೆಚ್ಚಿಸಿಕೊಳ್ತಾರೆ.
ಭೀಮ ಚಿತ್ರಕ್ಕಾಗಿ ಕರಿಚಿರತೆ ಮತ್ತೆ ರೆಡಿ!
ಬಾಲಯ್ಯ ಅಭಿನಯದ ವೀರ ಸಿಂಹ ರೆಡ್ಡಿ ಚಿತ್ರಕ್ಕಾಗಿಯೇ ದೇಹದ ತೂಕ ಹೆಚ್ಚಿಸಿಕೊಂಡು ಖಡಕ್ ವಿಲನ್ ಆಗಿಯೇ ಅಭಿನಯಿಸಿ ವಾಪಸ್ ಆಗಿದ್ದಾರೆ. ತಮ್ಮ ಕನಸಿನ ಪ್ರೋಜೆಕ್ಟ್ ಭೀಮ ಚಿತ್ರಕ್ಕಾಗಿಯೇ ಈಗ ಮತ್ತೆ ಎಲ್ಲ ತಯಾರಿಯನ್ನ ಮಾಡಿಕೊಳ್ಳುತ್ತಿದ್ದಾರೆ.
ಭೀಮನಿಗಾಗಿ ದೇಹದ ತೂಕ ಇಳಿಸಿದ ವಿಜಯ್
ದುನಿಯಾ ವಿಜಯ್ ತಮ್ಮ ಭೀಮಾ ಚಿತ್ರಕ್ಕಾಗಿ ದೇಹದ ತೂಕ ಇಳಿಸಿಕೊಂಡಿದ್ದಾರೆ. ದೇಹದ ತೂಕ ಹೆಚ್ಚಿಸಿಕೊಳ್ಳುವುದು ತುಂಬಾ ಸುಲಭವೇ ಆಗಿರುತ್ತದೆ. ಆದರೆ ದೇಹ ತೂಕ ಇಳಿಸಬೇಕಲ್ವೇ? ಆಗಲೇ ನೋಡಿ ಎಲ್ಲ ಗೊತ್ತಾಗೋದು. ಅದರಂತೆ ವಿಜಯ್ ದೇಹದ ತೂಕ ಇಳಿಸಿಕೊಳ್ಳುವುದು ಮತ್ತು ಹೆಚ್ಚಿಸಿಕೊಳ್ಳುವುದರಲ್ಲಿ ನಿಸ್ಸಿಮರು.
ಅದಕ್ಕೇನೆ ವಿಜಯ್ ದೇಹ ಅವರ ಮಾತು ಕೇಳುತ್ತದೆ. ಆ ಹಿನ್ನೆಲೆಯಲ್ಲಿಯೇ ವಿಜಯ್ ಈಗ ಮತ್ತೆ ದೇಹದ ತೂಕ ಇಳಿಸಿಕೊಂಡು ಸಖತ್ ಯಂಗ್ ಆಗಿಯೇ ಕಾಣಿಸುತ್ತಿದ್ದಾರೆ. ಭೀಮ ಚಿತ್ರಕ್ಕಾಗಿಯೇ ಮತ್ತೆ ತಯಾರಿನೂ ಮಾಡಿಕೊಂಡಿದ್ದಾರೆ.
ಭೀಮ ಸಿನಿಮಾದ ಟೀಮ್ ಚರ್ಚೆ ಬಲು ಜೋರು
ದುನಿಯಾ ವಿಜಯ್ ತಮ್ಮ ಚಿತ್ರದ ಕೆಲಸವನ್ನ ಪಕ್ಕಾ ಮಾಡಿಕೊಂಡೇ ಶೂಟಿಂಗ್ ಹೋಗ್ತಾರೆ. ಅದರಲ್ಲೂ ಚಿತ್ರಕ್ಕೆ ಇವರೇ ನಿರ್ದೇಶಕರಾಗಿದ್ದಾರೆ. ಹೀರೋನೂ ಇವರೇ ಆಗಿದ್ದಾರೆ. ಎರಡು ಜವಾಬ್ದಾರಿಯನ್ನ ಹೊತ್ತ ವಿಜಯ್, ಅಷ್ಟೇ ಪ್ಲಾನಿಂಗ್ ನಲ್ಲಿಯೇ ತಯಾರಿ ಶುರು ಮಾಡಿದ್ದಾರೆ.