ಖಾನಾಪೂರ ತಾಲೂಕಿನ ರಾಮಗುರವಾಡಿ ಗ್ರಾಮದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.
ಅದು ಎಲ್ಲಿ ಅಂತೀರಾ ಖಾನಾಪುರ ತಾಲೂಕಿನ ರಾಮಗುರವಾಡಿ ಗ್ರಾಮದಲ್ಲಿ 2023 ವಿಧಾನ ಸಭಾ ಚುನಾವಣೆ ಹೊಸ್ತಿಲಲ್ಲೇ ರಾಜಕೀಯ ವ್ಯಕ್ತಿಗಳಿಗೆ ಬಹಿಷ್ಕಾರ ಹಾಕಲಾಗಿದೆ.
ಇದರ ಕುರಿತು ಗ್ರಾಮಸ್ಥರು ಸೂಚನಾ ಫಲಕ ಅಳವಡಿಸುವ ಮೂಲಕ ಯಾವುದೇ ಪಕ್ಷ ಅಥವಾ ಸ್ವತಂತ್ರ ವ್ಯಕ್ತಿಗಳು ಚುನಾವಣಾ ಪ್ರಚಾರಕ್ಕಾಗಿ ಗ್ರಾಮದಲ್ಲಿ ಪ್ರಚಾರ ಅಥವಾ ಸಭೆ ನಡೆಸಬಾರದು, ಖಾನಾಪುರ ತಾಲೂಕಿನ ಶಾಸಕರು ಹಾಗೂ ಇತರೆ ಪಕ್ಷಗಳ ರಾಜಕೀಯ ವ್ಯಕ್ತಿಗಳಿಗೂ ಗ್ರಾಮಕ್ಕೆ ಆಗಮಿಸದಂತೆ ನಿರ್ಬಂಧ ಹೇರಲಾಗಿದೆ.
ಎರಡು ತಿಂಗಳಲ್ಲಿ ರಸ್ತೆ ಮಾಡಿಸಿ ಗ್ರಾಮದ ಇನ್ನಿತರ ಅಭಿವೃದ್ಧಿಯು ಆಗಬೇಕು ಎಂದು ಆಗ್ರಹಿಸಿರುವ ಗ್ರಾಮಸ್ಥರು ಅಭಿವೃದ್ಧಿ ಕೆಲಸ ಆದ ಬಳಿಕ ಅಷ್ಟೇ ಗ್ರಾಮದಲ್ಲಿ ಪ್ರವೇಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಗ್ರಾಮಸ್ಥರು ಒಮ್ಮತದಿಂದ ಈ ನಿರ್ಧಾರ ಕೈಗೊಂಡು ಸೂಚನಾ ಫಲಕ ಅಳವಡಿಸಿರುವ ಚರ್ಚೆ ಈಗ ಖಾನಾಪುರ ತಾಲ್ಲೂಕಿನಲ್ಲಿ ನಡೆಯುತ್ತಿದೆ.ಇದರ ಬಗ್ಗೆ ರಾಜಕೀಯ ಮುಖಂಡರು ಯಾವ ರೀತಿ ಸ್ವಂದಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.
Laxmi News 24×7