ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬೆಳಗಾವಿ ಬಿಜೆಪಿ ಮಹಾನಗರ ಕಾರ್ಯಕರ್ತರು ಸಂಭ್ರಮಿಸಿದರು.
ಇಂದು ನಗರದ ಚನ್ನಮ್ಮ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ , ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅದಕ್ಕಿಂತ ಮುಂಚೆ ಚನ್ನಮ್ಮ ಸರ್ಕಲ್ ನಲ್ಲಿ ಇರುವ ಗಣೇಶ ಮಂದಿರದಲ್ಲಿ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮ ಜೊತೆ ಮಾತನಾಡಿದ ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿ ಮುರಗೇಂದ್ರಗೌಡ ಪಾಟೀಲ್ ಅವರು. ರಾಜೀವ ಗಾಂಧಿ ಸಮಯದಲ್ಲಿ ಬಿಜೆಪಿಗೆ 149 ಸೀಟುಗಳು ಗುಜರಾತಿನಲ್ಲಿ ಬಂದಿದದ್ದವು, ಆದರೆ ಈಗ ಅದನ್ನು ಮೀರಿ ಈ ಬಾರಿ 150ಕ್ಕೂ ಹೆಚ್ಚು ಸಿಟುಗಳು ಗುಜರಾತಿನಲ್ಲಿ ಬಂದಿದ್ದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಗುಜರಾತ್ ಚುನಾವಣೆಯು ಕರ್ನಾಟಕದ ಚುನಾವಣೆಗೆ ಮಾದರಿ ಆಗಲಿದೆ. ಗುಜರಾತಿನಲ್ಲಿ ಗೆಲುವು ಆದಂತೆ ಕರ್ನಾಟಕದಲ್ಲಿ ಕೂಡಾ ಬಿಜೆಪಿ ಮುಂದೆ ಗೆಲುವು ಸಾಧಿಸಲಿದೆ. ಹಿಮಾಲಯ ಪ್ರದೇಶದಲ್ಲೂ ಕೂಡಾ ನಮ್ಮ ಗೆಲವು ಆಗುವು ನಿರಿಕ್ಷೇ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
Laxmi News 24×7