Breaking News

ಯೋಧ ರಸ್ತೆ ಅಪಘಾತಕ್ಕೆ ಬಲಿಪತ್ನಿಯನ್ನು ಸಂತೈಸುತ್ತಲೇ ಕಣ್ಣೀರು ಹಾಕಿದ ಹೆಬ್ಬಾಳಕರ್

Spread the love

ಬೆಳಗಾವಿ – ಸಮೀಪದ ನಾವಗೆ ಗ್ರಾಮದ ಯೋಧ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.

 

ನಾವಗೆ ಗ್ರಾಮದ ಶಿವಾಜಿ ಆನಂದ ತಳವಾರ ( 45) ಸೋಮವಾರ ತುಮಕೂರು ಬಳಿ ರಸ್ತೆ ಅಪಘಾತದಿಂದ ಸಾವಿಗೀಡಾಗಿದ್ದಾರೆ. ಶಿವಾಜಿ ಸಂಚರಿಸುತ್ತಿದ್ದ ಬೈಕ್ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ.

ರಜೆಯ ಮೇಲೆ ಬಂದಿದ್ದ ಶಿವಾಜಿ ಮೈಸೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಲು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. 19 ವರ್ಷದಿಂದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಾಜಿಗೆ ಈಚೆಗಷ್ಟೆ ಬಡ್ತಿ ಸಿಕ್ಕಿತ್ತು. 12 ವರ್ಷದ ಹಿಂದೆ ವಿವಾಹವಾಗಿದ್ದ.

ಶಿವಾಜಿ ಮೃತದೆಹವನ್ನು ಗ್ರಾಮಕ್ಕೆ ತಂದು ಈಗ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಸುದ್ದಿ ತಿಳಿದ ತಕ್ಷಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತು ಪುತ್ರ, ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೃಣಾಲ ಹೆಬ್ಬಾಳಕರ್ ಗ್ರಾಮಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.

ಲಕ್ಷ್ಮಿ ಹೆಬ್ಬಾಳಕರ್ ಮೃತನ ಪತ್ನಿಯನ್ನು ತಬ್ಬಿಕೊಂಡು ಸಂತೈಸುವ ಯತ್ನ ಮಾಡಿದರು. ಭಾವುಕರಾಗಿ ಹೆಬ್ಬಾಳಕರ್ ಕೂಡ ಕಣ್ಣೀರು ಸುರಿಸಿದರು.

ಭಾರತೀಯ ಸೇನೆ ಅಧಿಕಾರಿಗಳು ಕೂಡ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಶಿವಾಜಿ ನಿಧನಕ್ಕೆ ಇಡೀ ಗ್ರಾಮವೇ ಕಂಬನಿ ಮಿಡಿಯುತ್ತಿದೆ.


Spread the love

About Laxminews 24x7

Check Also

ಬೆಳಗಾವಿ DCC ಬ್ಯಾಂಕ ಚುನಾವಣೆಯನ್ನು ಎದುರಿಸಲು ನಮ್ಮ ಗುಂಪು ಸಿದ್ಧ:ಬಾಲಚಂದ್ರ ಜಾರಕಿಹೊಳಿ

Spread the loveಬೆಳಗಾವಿ- ಇದೇ ಅಕ್ಟೋಬರ್ 19 ರಂದು ನಡೆಯುವ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕಿನ ಚುನಾವಣೆಯನ್ನು ಎದುರಿಸಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ