Breaking News

ಕಣ್ಮನ ಸೆಳೆಯಿತು ಬೆಳಗಾವಿಯಲ್ಲಿ ಆಯೋಜಿಸಿದ್ದ ಕ್ಯಾಟ್ ಶೋ ,ಬೆಕ್ಕು ಪ್ರಿಯರು ನಾನಾ ತರಹದ ಬೆಕ್ಕುಗಳನ್ನು ನೋಡಿ ಪುಳಕಿತರಾದರು.

Spread the love

ಬೆಳಗಾವಿಯಲ್ಲಿ ಆಯೋಜಿಸಿದ್ದ ಕ್ಯಾಟ್ ಶೋ ಕುಂದಾನಗರಿ ಜನರ ಕಣ್ಮನ ಸೆಳೆಯಿತು. ಬೆಕ್ಕು ಪ್ರಿಯರು ನಾನಾ ತರಹದ ಬೆಕ್ಕುಗಳನ್ನು ನೋಡಿ ಪುಳಕಿತರಾದರು.

ಒಂದಕ್ಕಿಂತ ಒಂದು ಸುಂದರ, ಡಿಫರೆಂಟ್ ಬೆಕ್ಕುಗಳು. ಮುದ್ದಾದ ಬೆಕ್ಕುಗಳನ್ನು ಮುಗಿ ಬಿದ್ದು ನೋಡುತ್ತಿರುವ ಜನ. ಹೌದು ನೀವು ನೋಡುತ್ತಿರುವ ಈ ದೃಶ್ಯ ಬೆಳಗಾವಿಯ ಭಾಗ್ಯ ನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕ್ಯಾಟ್ ಶೋದಲ್ಲಿ.

 

ಹೌದು ಫೆಲೈನ್ ಕ್ಲಬ್ ಆಫ್ ಇಂಡಿಯಾ, ಮಾರ್ಸ ಇಂಡಿಯಾ ಸಹಯೋಗದಲ್ಲಿ ರವಿವಾರ ಚಾಂಪಿಯನ್‍ಶಿಪ್ ಕ್ಯಾಟ್ ಶೋ ಆಯೋಜಿಸಲಾಗಿತ್ತು. ಈ ವೇಳೆ 200ಕ್ಕಿಂತ ಹೆಚ್ಚು ಬೆಕ್ಕುಗಳು ಭಾಗಿಯಾಗಿದ್ದವು. ಪರ್ಶಿಯನ್, ಮೇನ್‍ಕೂನ್, ಬೆಂಗಾಲ್, ಇಂಡಿಮೌ ಸೇರಿ ಇನ್ನಿತರ ತಳಿಗಳ ಬೆಕ್ಕುಗಳನ್ನು ನೋಡಿ ಜನರು ಸಂತಸ ಪಟ್ಟರು. ಅದೇ ರೀತಿ ಇವುಗಳ ಮಾಲೀಕರು ಬೆಕ್ಕುಗಳನ್ನು ಯಾವ ರೀತಿ ಪಾಲನೆ, ಪೋಷಣೆ ಮಾಡುತ್ತಾರೆ..? ಅದೇಷ್ಟು ಕಾಳಜಿ ವಹಿಸುತ್ತಾರೆ ಎಂಬ ಕುರಿತು ತಿಳಿದುಕೊಂಡರು. ಆಯೋಜಕರು ಮಾತನಾಡಿ ಬೆಳಗಾವಿಯಲ್ಲಿ ಮೊದಲ ಬಾರಿಗೆ ಕ್ಯಾಟ್ ಶೋ ಆಯೋಜಿಸಲಾಗಿದೆ. ಕೊಲ್ಹಾಪುರ, ಮುಂಬೈ, ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿ ಇನ್ನಿತರ ಕಡೆಯಿಂದ 10 ಪ್ರಕಾರದ ಬೆಕ್ಕುಗಳು ಭಾಗಿಯಾಗಿವೆ. ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದಾರೆ. ಈ ಕ್ಯಾಟ್ ಶೋಗೆ ಜನರಿಂದ ಬಹಳ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

 

: ಇದೇ ವೇಳೆ ಬೆಂಗಳೂರಿನಿಂದ ತಮ್ಮ ಬೆಕ್ಕನ್ನು ತೆಗೆದುಕೊಂಡು ಬಂದಿದ್ದ ಶಾರೂಖ್ ಎಂಬುವವರು ಮಾತನಾಡಿ ಇದು ನಮ್ಮ ಪೋಶಿಯನ್, ಇದು ತುಂಬಾ ಫ್ರೇಂಡ್ಲಿ ಆಗಿದೆ. ಕಡ್ಡಾಯವಾಗಿ ಇದಕ್ಕೆ ಗ್ರೂಮಿಂಗ್ ಮಾಡಬೇಕು. ಪ್ರತಿದಿನ ನಾವು ಇದನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತೇವೆ. 24 ಗಂಟೆ ಡ್ರೈ ಫುಡ್, ವೆಟ್ ಫೂಡ್ ದಿನಕ್ಕೆ ಒಮ್ಮೆ ನೀಡುತ್ತೇವೆ. ವಾರಕ್ಕೆ ಒಮ್ಮೆ ಸ್ನಾನ ಮಾಡಿಸಲೇಬೇಕು. ಬಹಳ ಜನ ಬಂದಿದ್ದಾರೆ. ವಿಶೇಷವಾಗಿ ಶಾಲೆಯ ಮಕ್ಕಳು ಇದನ್ನು ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ