ಕುರಿಗಾಯಿಗೆ ಬೈಕ್ ಡಿಕ್ಕಿಯಾಗಿ ಕುರಿಗಾಯಿ ಸ್ಥಳದಲ್ಲಿ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಹತ್ತಿರದಲ್ಲಿ ನಡೆದಿದೆ.
ಮೃತನನ್ನು ಚಿಕ್ಕೋಡಿ ಮೂಲದ ನಿಂಗಪ್ಪ ಹಾಲಪ್ಪ ಕದ್ದಿ ಗುರುತಿಸಲಾಗಿದೆ.
ಬೈಕ್ ಸವಾರ ಕವಡಿಮಟ್ಟಿ ಗ್ರಾಮದ ಹಣಮಂತ ನಿಂಗಪ್ಪ ಮಾದರಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.