ಚಿತ್ರದುರ್ಗ: ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎಸ್ಕಾರ್ಟ್ ವಾಹನ ಪಲ್ಟಿಯಾದ ಘಟನೆ ಹಿರಿಯೂರು ನಗರದಲ್ಲಿ ನಡೆದಿದೆ.
ಹಿರಿಯೂರು ತಾಲೂಕು ಕಚೇರಿ ಬಳಿ ದುರ್ಘಟನೆ ನಡೆದಿದ್ದು, ಕೆಲವು ಪೊಲೀಸರು ಗಾಯಗೊಂಡಿದ್ದಾರೆ.
ವಾಹನ ತಾಗಿ ಪಾದಾಚಾರಿಗಳಿಬ್ಬರೂ ಗಾಯಗೊಂಡಿದ್ದಾರೆ.
ವಾಣಿವಿಲಾಸ ಡ್ಯಾಂನಿಂದ ಹಿರಿಯೂರು ಪಟ್ಟಣದ ನೆಹರು ಮೈದಾನಕ್ಕೆ ಬರುವ ವೇಳೆ ಘಟನೆ ನಡೆದಿದೆ. ಮುಂದಿನಿಂದ ಅಡ್ಡ ಬಂದ ಬೈಕ್ ತಪ್ಪಿಸಲು ಬ್ರೇಕ್ ಹಾಕಿದ ಕಾರಣದಿಂದ ಸಿಇಎನ್ ಸಿಪಿಐ ರಮಾಕಾಂತ್ ಇದ್ದ ಪೊಲೀಸ್ ವಾಹನ ಪಲ್ಟಿಯಾಗಿದೆ. ಓರ್ವ ಮಹಿಳಾ ಪೇದೆ, ಮೂವರು ಕಾನ್ಸ್ಟೇಬಲ್, ಸಿಪಿಐ ರಮಾಕಾಂತ್, ಪಿಎಸ್‌ಐ ಸೇರಿ ಹಲವರಿಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಪಲ್ಲಿಯಾಗುವ ವೇಳೆ ಎಸ್ಕಾರ್ಟ್ ವಾಹನವು ನಡೆದುಕೊಂಡು ಹೋಗುತ್ತಿದ್ದ ತಾಯಿ ಮತ್ತು ಮಗನಿಗೆ ಹೊಡೆದಿದೆ. ಇದರಿಂದ ಪಾದಾಚಾರಿಗಳಾದ ಮಸ್ಕಲ್ ಗ್ರಾಮದ ಮಂಜುಳ, ಪುತ್ರ ಮನೋಜ್ ಗಂಭೀರವಾಗಿ ಗಾಯ ಗೊಂಡಿದ್ದಾರೆ. ಗಾಯಾಳುಗಳನ್ನು ಹಿರಿಯೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
Laxmi News 24×7