ಗೋಕಾಕ ತಹಶೀಲ್ದಾರ್ ಕಚೇರಿಯಲ್ಲಿ ಕಂಪ್ಯೂಟರ್ ಕಳ್ಳತನವಾಗಿರುವ ಘಟನೆ ನಡೆದಿದೆ.
ಹೌದು ಕಳ್ಳರು ಮನೆ, ದೇವಸ್ಥಾನಕ್ಕೆ ಕನ್ನ ಹಾಕುತ್ತಿದ್ದರು ಆದರೆ. ಇದೀಗ ತಹಶೀಲ್ದಾರ್ ಕಚೇರಿ ಮೇಲೂ ತಮ್ಮ ವಕ್ರದೃಷ್ಟಿ ಬೀರಿದ್ದು. ಪಹಣಿ ಪತ್ರಿಕೆ ನೀಡುವ ಕಂಪ್ಯೂಟರ್‍ನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಪಾಸ್ವರ್ಡ್,
ಲಾಗಿನ್ ಲಾಕ್ ಮಾಡಲಾಗಿದೆ. ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಕಳ್ಳರಿಗೆ ಬಲೆ ಬೀಸಿದ್ದಾರೆ. ಈ ಸಂಬಂಧ ಶಹರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Laxmi News 24×7