Breaking News

ಸಿಐಟಿಯು ರಾಜ್ಯಾಧ್ಯಕ್ಷೆ ಕಾರು ಘಾಟಿಯಲ್ಲಿ ಅಪಘಾತ: ಪಾರು

Spread the love

ಕುಂದಾಪುರ: ಇಲ್ಲಿ ಮೂರು ದಿನಗಳ ಕಾಲ ನಡೆದ ಸಿಐಟಿಯುವಿನ 15ನೇ ರಾಜ್ಯ ಸಮ್ಮೇಳನ ಮುಗಿಸಿ ಗುರುವಾರ ರಾತ್ರಿ ಹಾಸನಕ್ಕೆ ಹೋಗುತ್ತಿದ್ದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಅವರ ಕಾರು ಆಗುಂಬೆಯಲ್ಲಿ ಅಪಘಾತಕ್ಕೊಳಗಾಗಿದೆ.

ಧರ್ಮೇಶ್ ಅವರು ಕಾರು ಚಲಾಯಿಸುತ್ತಿದ್ದು, ಆಗುಂಬೆ ಘಾಟ್‌ ನಂತರ ಜಯಪುರದಿಂದ ಆಲ್ದೂರಿಗೆ 5 ಕಿ.ಮೀ.

ಇದೆ ಎನ್ನುವಾಗ ರಾತ್ರಿ 10.30ರ ಸುಮಾರಿಗೆ ಕಾರು ರಸ್ತೆ ಬಿಟ್ಟು ಪ್ರಪಾತದೆಡೆಗೆ ಹೋಗಿದೆ. 50ಅಡಿಗಿಂತ ಹೆಚ್ಚು ಕೆಳಗಿಳಿದಿತ್ತು. ಮಾಹಿತಿ ತಿಳಿಸಲು ನೆಟ್‌ವರ್ಕ್‌ ಕೂಡಾ ಇರಲಿಲ್ಲ. ಹೆಜ್ಜೆ ಇಡಲು ಕಾರಿನ ಬಾಗಿಲು ಮೇಲೆ ಭಾರ ಬಿಟ್ಟರೆ ಕಾರು ಮುಂದಕ್ಕೆ ಹೋಗಿ ಭದ್ರಾನದಿಯಲ್ಲಿ ಬೀಳುವ ಅಪಾಯ ಇತ್ತು. ಕಾರಿನ ಮೇಲೆ ಭಾರ ಬಿಡದೆ ಕೆಳಗಿಳಿದರೆ ಕಾಲುಗಳು ಹಸಿಮಣ್ಣಿನೊಳಗೆ ಹೋಗುತ್ತದೆ ಎಂಬ ಪರಿಸ್ಥಿತಿಯಲ್ಲಿದ್ದರು. ಸಹಾಯಕ್ಕೆ ಕೂಗಿದರೆ ಯಾರಿಗೂ ಕೇಳಿಸದ ಸ್ಥಿತಿಯಲ್ಲಿ ಇಬ್ಬರೇ ಮಹಿಳೆಯರು ರಸ್ತೆ ಬದಿಗೆ ಬಂದಾಗ ಅದೇ ಸಮ್ಮೇಳನದಿಂದ ಮರಳಿ ಹೋಗುತ್ತಿದ್ದ ಸುಕುಮಾರ್‌ ಅವರಿದ್ದ ಕಾರು ಬಂತು. ಈ ಸ್ಥಳದಲ್ಲಿ ಕನಿಷ್ಠ 100ಕ್ಕೂ ಹೆಚ್ಚು ಘಟನೆ ಗಳು ಆಗಿವೆ ಎಂದು ಬಳಿಕ ಪೊಲೀಸರು ತಿಳಿಸಿದರು.

ಈ ಅಪಾಯಕಾರಿ ಸ್ಥಳದಲ್ಲಿ ಎಲ್ಲಾ ವಾಹನಗಳಿಗೂ ಕಾಣುವ ಹಾಗೆ ,ರಾತ್ರಿ ಸಮಯದಲ್ಲಿ ಕಾಣುವಂತೆ ಬೋರ್ಡ್‌ ಹಾಕಬೇಕು. ವಾಹನಗಳಿಗೆ ಸಮಸ್ಯೆಯಾಗದಂತೆ ತಡೆಗೋಡೆ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಅಪ್ರಾಪ್ತೆ ತಂಗಿಗೆ ಮಗು ಕರುಣಿಸಿ ಜೈಲುಪಾಲಾದ ಭೂಪ!

Spread the loveಕೊಪ್ಪಳ, ನವೆಂಬರ್​ 06: ನಿನ್ನನ್ನು ಮದುವೆ ಆಗುತ್ತೇನೆ ಎಂದು ಪುಸಲಾಯಿಸಿ ಸ್ವಂತ ಅಣ್ಣನೇ ಅಪ್ರಾಪ್ತೆ ತಂಗಿ ಜೊತೆ ದೈಹಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ