ಮುಂಬೈ: ಬಾಕ್ಸ್ ಆಫಿಸ್‌ನಲ್ಲಿ ಹಿಂದಿ ಅವತರಿಣಿಕೆಯ “ಕಾಂತಾರ’ ಸಿನಿಮಾದ ಅಬ್ಬರ ಮುಂದುವರಿದಿದೆ. ಬಾಕ್ಸ್ ಆಫಿಸ್ ಗಳಿಕೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ “ಕಾಶ್ಮೀರ್ ಫೈಲ್ಸ್’ನ ಎಲ್ಲಾ ದಾಖಲೆಗಳನ್ನು ಕಾಂತಾರಾ ಸಿನಿಮಾ ಮುರಿದಿದೆ.
ಗಳಿಕೆಯಲ್ಲಿ ಶೇ. 1,000 ಪಟ್ಟು ಲಾಭ ಗಳಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ.
ರಿಷಭ್ ಶೆಟ್ಟಿ ನಿರ್ದೇಶನ ಮತ್ತು ನಟ ನೆಯ ಕಾಂತಾರ ಸಿನಿಮಾದ ಹಿಂದಿ ಅವ ತರಿಣಿಕೆಯು ಸೆ.30ರಂದು ಬಿಡುಗಡೆಯಾ ಯಿತು. ಈಗಾಗಲೇ ಕೆಜಿಎಫ್-2 ಸಿನಿಮಾದ ದಾಖಲೆಗಳನ್ನು ಕಾಂತಾರ ಮುರಿದಿದೆ. ಹಿಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಿ 46 ದಿನಗಳು ಕಳೆದರೂ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದ ರ್ಶನ ಕಾಣುತ್ತಿದೆ. ಮೂಲಗಳ ಪ್ರಕಾರ, ಕಾಂತಾರ ಸಿನಿಮಾ ನಿರ್ಮಾಣಕ್ಕೆ 7.5 ಕೋಟಿ ರೂ. ವೆಚ್ಚವಾಗಿದೆ. ಹಿಂದಿ ಅವತರಿ ಣಿಕೆಯಲ್ಲಿ ಇದುವರೆಗೂ 76 ಕೋಟಿ ರೂ. ಆದಾಯ ಬಂದಿದೆ.
ಈ ಪೈಕಿ 68.5 ಕೋಟಿ ರೂ. ಲಾಭ ಗಳಿಸಿದೆ. ಈ ಮೂಲಕ ಶೇ. 913 ರಷ್ಟು ಲಾಭ ಗಳಿಸಿದಂತಾಗಿದೆ. ಶೀಘ್ರ ದಲ್ಲಿ ಲಾಭ ಗಳಿಕೆಯಲ್ಲಿ ಶೇ. 1,000 ರಷ್ಟು ತಲುಪಲಿದೆ. ನ. 24 ರಿಂದ ಒಟಿಟಿ ಯಲ್ಲಿ ಕಾಂತಾರ ಸಿನಿಮಾ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ