Breaking News

ಸಿದ್ದರಾಮಯ್ಯಗೆ ಸಡ್ಡು ಹೊಡೆದ ವರ್ತೂರು ಪ್ರಕಾಶ್‌

Spread the love

ವೇಮಗಲ್‌/ಕೋಲಾರ: ಕೋಲಾರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ನನ್ನ ವಿರುದ್ಧ ಸಿದ್ದರಾಮಯ್ಯ ಕಣಕ್ಕಿಳಿಯುವ ದುಸ್ಸಾಹಸ ಮಾಡುವುದಿಲ್ಲ. ನಾನೂ ಕುರುಬ ಸಮಾಜದವನೇ. ಇಲ್ಲಿಗೆ ಬಂದರೆ ಇಡೀ ಕುರುಬ ಸಮಾಜ ಅವರಿಗೆ ಛೀಮಾರಿ ಹಾಕುತ್ತದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ಎಚ್ಚರಿಸಿದರು.

 

ಸಿದ್ದರಾಮಯ್ಯ ಕೋಲಾರ ಭೇಟಿ ಸಂದರ್ಭದಲ್ಲೇ ಮಾಜಿ ಸಿಎಂ ಸಂಚರಿಸುವ ಮಾರ್ಗದಲ್ಲೇ ವೇಮಗಲ್‌ ಮೂಲಕ ಸೀತಿ -ಮದ್ದೇರಿ-ರಾಜಕಲ್ಲಹಳ್ಳಿವರೆಗೂ ಬೃಹತ್‌ ಬೈಕ್‌ ರ್‍ಯಾಲಿ ಮೂಲಕ ಶಕ್ತಿ ಪ್ರದರ್ಶನ ನಡೆಸಿ, ಸಿದ್ದರಾಮಯ್ಯ ಅವರಿಗೆ ಸಡ್ಡು ಹೊಡೆದು ಎಚ್ಚರಿಕೆಯ ಸಂದೇಶ ರವಾನಿಸಿದ ನಂತರ ನೂರಾರು ಮಂದಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ರಮೇಶ್‌ಕುಮಾರ್‌,ಎಸ್‌.ಎನ್‌.ನಾರಾಯಣಸ್ವಾಮಿ ಮತ್ತಿತರರು ಸೋಲಿನ ಭಯದಿಂದ ಸಿದ್ದರಾಮಯ್ಯರನ್ನು ಕರೆಯುತ್ತಿದ್ದಾರೆ. ಆದರೆ ಈವರೆಗೂ ಸಿದ್ದರಾಮಯ್ಯ ಬರುವುದಾಗಿ ಎಲ್ಲೂ ಹೇಳಿಲ್ಲ. ವೇಮಗಲ್‌ ಹೋಬಳಿಯಲ್ಲಿ ನನ್ನ ಬಳಿಯೇ ತಿಂದು ತೇಗಿ ಕೊಬ್ಬಿದ ಮೂವರು ವಂಚಕರನ್ನು ನಂಬಿ ಕೋಲಾರಕ್ಕೆ ಬರುವ ಧೈರ್ಯ ಮಾಡುವುದಿಲ್ಲ ಎಂದರು.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ