Breaking News

ಸಿಸಿಟಿವಿ ಕಣ್ಣು ತಪ್ಪಿಸಿ ನೆಲಮಾಳಿಗೆಯಲ್ಲಿ ಚಾಕು ತೋರಿಸಿ ಬಾಲಕಿಯರ ಮೇಲೆ ಅತ್ಯಾಚಾರ, ಬಳಿಕ ಅಬಾಶನ್‌ : ಮುರುಘ ಶ್ರೀಗಳ ವಿರುದ್ದ ಚಾರ್ಚ್‌ ಶೀಟ್‌ನಲ್ಲಿ ಸ್ಪೋಟಕ ಮಾಹಿತಿ

Spread the love

ಚಿತ್ರದುರ್ಗ: ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಸದ್ಯ ಮುರುಘಾ ಶ್ರೀಗಳ ಮೇಲೆ ಗಂಭೀರ ಆರೋಪ ಕೇಳಿ ಬಂದಿದ್ದು, ಪ್ರಕರಣ ಸಂಬಂಧ ಈಗಾಗಲೇ ಪೋಲಿಸರು ನ್ಯಾಯಾಲಯಕ್ಕೆ ಚಾರ್ಚ್‌ ಶೀಟ್‌ ಸಲ್ಲಿಸಲಾಗಿದೆ.

ಇನ್ನೂ ಮುರುಘ ಶ್ರೀಗಳು ಬಾಲಕಿಯರ ಮೇಲೆ ಅತ್ಯಾಚಾರ ಮಾಡಲು ರಹಸ್ಯ ನೆಲಮಾಳಿಗೆಯನ್ನು ಮಾಡಿಕೊಂಡಿದ್ದು ಅಂತ ಪೋಲಿಸರ ಮುಂದೆ ಬಾಲಕಿಯರು ಹೇಳಿದ್ದಾರೆ ಎನ್ನಲಾಗಿದ್ದು, ಚೀಟಿಗಳಲ್ಲಿ ಇಂತಹ ಮಕ್ಕಳು ಬೇಕು ಬರೆದುಕೊಡುತ್ತಿದ್ದರು ಎನ್ನಲಾಗಿದೆ.

ಇದಕ್ಕೇ ವಾರ್ಡನ್‌ ರಶ್ಮಿ ಸಾಥ್‌ ನೀಡುತ್ತಿದ್ದಳು ಎನ್ನಲಾಗಿದೆ.
ಇದಲ್ಲದೇ ಸ್ವಾಮಿಜೀ ತನ್ನ ಪಲ್ಲಂಗಕ್ಕೆ ಬರಲು ಹೆಸರಗಳನ್ನು ರಶ್ಮಿಗೆ ಬರೆದುಕೊಡುತ್ತಿದ್ದರು ಎನ್ನಲಾಗಿದ್ದು, ಕಸ ಗುಡಿಸುವ ನೆಪದಲ್ಲಿ ಅಲ್ಲಿಗೆ ಬಾಲಕಿಯರನ್ನು ಕಳಿಸುತ್ತಿದ್ದರು ಎನ್ನಲಾಗಿದೆ. ತೀರ್ಥ, ಪ್ರಸಾದ, ಹಣ್ಣು ಹಂಪಲು, ಡ್ರೈಪ್ರೂಟ್‌ಗಳನ್ನು ನೀಡಿ ಅದರಲ್ಲಿ ಮತ್ತು ಬರಿಸಲಾಗಿ ಬಳಿ ಅವರ ಮೇಲೆ ಅತ್ಯಾಚಾರ ನಡೆಸುತ್ತಿದ್ದರು ಎನ್ನಲಾಗಿದೆ. ಇನ್ನೂ ಶ್ರೀಗಳ ರೂಮ್‌ಗೆ ಹೋಗದೇ ಹೋದ್ರೆ ವಾರ್ಡ್‌ನ್‌ ರಶ್ಮಿ ನಮ್ಮನ್ನು ಬೈಯುತ್ತಿದ್ದರು ಅಂತ ಬಾಲಕಿಯರು ಹೇಳಿದ್ದಾರೆ ಎನ್ನಲಾಗಿದೆ. ಇದಲ್ಲದೇ ಸಿಸಿಟಿವಿಯಲ್ಲಿ ಇರೋ ಕಡೆ ನಮ್ಮನ್ನು ಕಳುಹಿಸುತ್ತಿರಲಿಲ್ಲ, ಉತ್ತರ ಕಡೆ ಇರೋ ಬಾಗಿಲಿನಿಂದ ನಮ್ಮನ್ನು ಕಳುಹಿಸಲಾಗುತಿತ್ತು ಬಾಲಕಿಯರು ಆರೋಪಿಸಿದ್ದಾರೆ.

ಇದಲ್ಲದೇ ಕೆಲವು ಬಾಲಕಿಯರಿಗೆ ಅಬಾಶನ್‌ ಕೂಡ ಮಾಡಲಾಗಿತ್ತು ಎನ್ನಲಾಗಿದ್ದು, ಪ್ರತಿ ಭಾನುವಾರ ಜನರಲ್‌ ರೂಮ್‌ಗೆ ಶಿಫ್ಟ್‌ ಮಾಡಲಾಗುತಿತ್ತು, ಈ ಪೈಕಿ ಇಬ್ಬರಿಗೆ ಕಸ ಗುಡಿಸಲು ಸೂಚನೆ ನೀಡಲಾಗುತಿತ್ತು, ಇದಲ್ಲದೇ ಸ್ವಾಮೀಜಿ ಆಗ ಬಾಲಕಿಯರ ಮೇಲೆ ಬೀಳುತ್ತಿದ್ದ ಎನ್ನಲಾಗಿದೆ. ಸ್ವಾಮಿಜೀಯನ್ನು ಕೈಮುಗಿದು ಕೇಳಿಕೊಳ್ಳುತ್ತಿದ್ದರು ಕೂಡ ಆತ ಬಿಡುತ್ತಿರಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.


Spread the love

About Laxminews 24x7

Check Also

ಪತಿಗೆ ಹೊಡೆದು ಶೌಚಾಲಯ ಗುಂಡಿಗೆ ಹಾಕಿದ್ದ ಪತ್ನಿ

Spread the loveಚಾಮರಾಜನಗರ: ಪ್ರಿಯಕರನ ಜೊತೆ ಸೇರಿ ತನ್ನ ಪತಿಗೆ ಹೊಡೆದು ಶೌಚಾಲಯ ಗುಂಡಿಗೆ ಹಾಕಿದ್ದ ಪತ್ನಿ ಹಾಗೂ ವ್ಯಕ್ತಿಗೆ ಅಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ