Breaking News

ನಾಳೆಯಿಂದ – ಗುರುವಾರದವರೆಗೆ ಅಪ್ಪು ʼಗಂಧದ ಗುಡಿʼ ರಿಯಾಯಿತಿ ದರದಲ್ಲಿ ಪ್ರದರ್ಶನ

Spread the love

ಬೆಂಗಳೂರು: ಅಮೋಘ ವರ್ಷ ನಿರ್ದೇಶನದ ಅಪ್ಪು ಅಭಿನಯದ ʼಗಂಧದ ಗುಡಿʼ ಸಾಕ್ಷ್ಯ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿರಂಗ, ಪ್ರೇಕ್ಷಕರು ಸಾಕ್ಷ್ಯ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ನಮ್ಮ ನಾಡಿನ ಜೀವ ವೈವಿಧ್ಯತೆಯನ್ನು ಸಾರುವ ʼಗಂಧದ ಗುಡಿʼಯನ್ನು ಎಲ್ಲರೂ ನೋಡಬೇಕು ಮಕ್ಕಳಿಗೆ ಉಚಿತವಾಗಿ ಸಾಕ್ಷ್ಯ ಚಿತ್ರವನ್ನು ತೋರಿಸಬೇಕೆನ್ನುವ ಕೂಗು ಕೇಳಿ ಬಂದಿತ್ತು.

ಈ ಮಾತಿಗೆ ಸ್ವತಃ ಅಪ್ಪು ಪತ್ನಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್ ಅವರು ಸ್ಪಂದಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಗಂಧದಗುಡಿ ಅಪ್ಪು ರವರ ಒಂದು ಕನಸು ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪಗೊಳ್ಳಲು ಕಾರಣ, ಅಪ್ಪು ಅವರ ಉದ್ದೇಶ ಈ ಸಿನಿಮಾ ಎಲ್ಲ ಕನ್ನಡಿಗರು ನೋಡಬೇಕೆಂಬುದು ಅದರಲ್ಲೂ ಮಕ್ಕಳು ನೋಡಬೇಕೆಂಬುದು, ಈ ಸಲುವಾಗಿ ನಾನು ಹಾಗೂ ಚಿತ್ರ ತಂಡ ಎಲ್ಲರೊಡನೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ನಮ್ಮ ಚಿತ್ರ ಗಂಧದಗುಡಿಯನ್ನು 07-11-2022 ಸೋಮವಾರದಿಂದ 10-11-2022 ಗುರುವಾರದವರೆಗೂ ಸಿಂಗಲ್ ಥೀಯೇಟರ್ ಗಳಲ್ಲಿ 56/- ರೂ.ಗಳಿಗೆ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ 112/- ರೂ ಗಳಿಗೆ ಕರ್ನಾಟಕ ರಾಜ್ಯಾದ್ಯಂತ ದಿನದ ಎಲ್ಲಾ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ಸಂರಕ್ಷಿಸೋಣ, ಗಂಧದಗುಡಿ ಯನ್ನು ತೋರಿಸೋಣ ಎಂದಿದ್ದಾರೆ.

ಸದ್ಯ ʼಗಂಧದ ಗುಡಿʼ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣ: ಬಂಧನದ ಭೀತಿಯಲ್ಲಿದ್ದ ಯೂಟ್ಯೂಬರ್ ಸಮೀರ್ ಎಂಡಿಗೆ ಬಿಗ್ ರಿಲೀಫ್

Spread the loveಮಂಗಳೂರು (ಆಗಸ್ಟ್ .21):  ಧರ್ಮಸ್ಥಳ ವಿರುದ್ಧ ವಿಡಿಯೋ ಮೂಲಕ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಎಂಡಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ